ಹುಬ್ಬಳ್ಳಿ: ವ್ಯಕ್ತಿಯೊರ್ವ ಕಲ್ಲಿನ ಕ್ವಾರಿಯಲ್ಲಿ ತುಂಬಿದ್ದ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ನಡೆದಿದೆ.
ರುದ್ರಗೌಡ ಹೊನ್ನಪ್ಪಗೌಡ್ರ (40) ಮೃತನಾಗಿದ್ದು, ಈತ ಬುಧವಾರ ಮನೆಯಿಂದ ಹೊರಹೋಗಿ ಕಲ್ಲಿನ ಕ್ವಾರಿಯಲ್ಲಿ ಬಿದ್ದಿದ್ದಾನೆ. ಪರಿಣಾಮ ನೂರಾರು ಅಡಿಯ ಆಳದ ನೀರಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದ, ಆದರೆ ಮೃತನ ಶವ ಮಾತ್ರ ಪತ್ತೆಯಾಗಿದಿಲ್ಲ.
ಇಂದು ಬೆಳಿಗ್ಗೆ ಶವ ಮೇಲಕ್ಕೆ ಬಂದಿದ್ದು, ವಿಷಯ ತಿಳಿಯುತ್ತಿದ್ದಂತೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಹಾಗೂ ಸ್ಥಳೀಯರು, ಈಜುತಜ್ಞರ ಸಹಾಯದಿಂದ ಶವವನ್ನು ಹೊರತೆಗೆಯುವ ಕೆಲಸ ಮಾಡಿದ್ದಾರೆ. ಈ ಘಟನೆ ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.