ಹುಬ್ಬಳ್ಳಿ ಬ್ರೇಕಿಂಗ್: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ ಕಾರಿನಲ್ಲಿದ್ದ ಮೂರು ಜನ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಈಗಷ್ಟೇ ನಡೆದಿದೆ.
ಹುಬ್ಬಳ್ಳಿಯ ಹೊರವಲಯದ ನೋಲ್ವಿ ಕ್ರಾಸ್ ಬಳಿ ಈ ಒಂದು ಅಪಘಾತ ಸಂಭವಿಸಿದೆ. ವರೂರ್ ನಿಂದ ಹುಬ್ಬಳ್ಳಿ ಕಡೆ ಬರುತಿದ್ದ ಕ್ವಿಡ್ ಕಾರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್ ಗೆ ಡಿಕ್ಕಿ ಹೊಡೆದು ನುಜ್ಜು ನುಜ್ಜಾಗಿದೆ. ಪರಿಣಾಮ ಕಾರಿನಲ್ಲಿದ್ದ ಮೂರು ಜನ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟರೆ, ಎರೆಡು ಜನರಿಗೆ ಗಂಭೀರ ಗಾಯಗಳಾಗಿವೆ.

ಮೃತಪಟ್ಟವರನ್ನು ಹುಬ್ಬಳ್ಳಿಯ ಲಿಂಗರಾಜ್ ನಗರ ನಿವಾಸಿಗಳೆಂದು ಹೇಳಲಾಗಿದೆ.ಸದ್ಯ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಹುಬ್ಬಲಿಂಗ್ರಮಿನ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.