ಹುಬ್ಬಳ್ಳಿ: ಹಣಕಾಸಿನ ವಿಚಾರಕ್ಕೆ ಇಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಕಾಲಿಗೆ ಗುಂಡು ಹೊಡೆದ ಘಟನೆ ವಾಣಿಜ್ಯ ನಗರಿಯಲ್ಲಿ ಬೆಳ್ಳಂಬೆಳಿಗ್ಗೆ ನಡೆದಿದೆ.

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಹೆಗ್ಗೇರಿ ಬಳಿ ಇರ್ಫಾನ್ ಸುಂಕದ್ ಹಾಗೂ ಮಂಜುನಾಥ್ ದೊಡ್ಡಮನಿ ಮೇಲೆ ಮಲ್ಲಿಕ್ ಆದೋನಿ ಎಂಬ ರೌಡಿಶೀಟರ್ ತಳವಾರ್ ನಿಂದ ಹಲ್ಲೆ ಮಾಡಿದ್ದ, ತನಗೂ ಕೂಡ ಹಲ್ಲೆ ಮಾಡಿದ್ದಾರೆಂದು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

ಘಟನೆಯ ಹಿನ್ನೆಲೆ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಯಾರೂ ಯಾರಿಗೆ ಹಲ್ಲೆ ಮಾಡಿದ್ದಾರೆಂಬುದು ಸ್ಪಷ್ಟವಾಗಿದೆ. ತದನಂತರ ಆರೋಪಿ ಮಲ್ಲಿಕ್ ನನ್ನು ವಿಚಾರಣೆ ನಡೆಸಿ ಇನ್ನುಳಿದವರ ಪತ್ತೆಗಾಗಿ ಹೊರವಲಯದಲ್ಲಿ ಸ್ಥಳಮಹಜರ್ ಮಾಡಲು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮಲ್ಲಿಕ್ ಪ್ರಯತ್ನಿಸಿದ್ದಾನೆ. ಈ ವೇಳೆ ಆರೋಪಿ ಮಲ್ಲಿಕ್ ಕಾಲಿಗೆ ಗುಂಡು ಹೊಡೆಯಲಾಗಿದೆ.
ಆರೋಪಿ ನಡೆಸಿದ ಹಲ್ಲೆಯಿಂದಾಗಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ವಿಶ್ವನಾಥ್ ಆಲಮಟ್ಟಿ, ಸಿಬ್ಬಂದಿ ಷರೀಫ್ ಹಾಗೂ ಕಲ್ಲನಗೌಡ ಇವರಿಗೆ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೌಡಿಶೀಟರ್ ಕಾಲಿಗೆ ಗುಂಡೇಟು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್, .ಪೊಲೀಸರ ನಿರ್ಲಕ್ಷವೇ ಈ ಗಲಾಟೆಗೆ ಕಾರಣ ಎಂದ ಗುಲಾಬ್..
ಹುಬ್ಬಳ್ಳಿ: ರೌಡಿಶೀಟರ್ ಕಾಲಿಗೆ ಗುಂಡೇಟು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ರಂಜಾನ್ ಹಿಂದೆಯೇ ಗಲಾಟೆ ನಡೆದಿದೆ. ನನ್ನ ಸಹೋದರ ಮಲ್ಲಿಕ್ ಹೆಸರು ಬರೆದಿಟ್ಟು ಆತ್ಮಹತ್ಯೆಗೂ ಯತ್ನಿಸಿದ್ದ, ಈ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತೆರಳಿದ್ರೂ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹಲ್ಲೆಗೆ ಒಳಗಾದ ಇರ್ಫಾನ್ ಸಹೋದರ ಗುಲಾಬ್ ಆರೋಪ ಮಾಡಿದ್ದಾನೆ.
ಈ ಕುರಿತು ನಗರದ ಕಿಮ್ಸ್ ನಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಆತ, ನನ್ನ ಸಹೋದರ ಇರ್ಫಾನ್ ಬ್ಯಾಂಕ್ ನಲ್ಲಿ ಎಂಟು ಲಕ್ಷ ರೂ. ಸಾಲ ಪಡೆದಿದ್ದ, ಈ ಪೈಕಿ ಇರ್ಫಾನ್ ಬಳಿ ಮಲ್ಲಿಕ್ ನಾಲ್ಕು ಲಕ್ಷ ರೂ. ಪಡೆದುಕೊಂಡಿದ್ದ. ಹಣವನ್ನು ವಾಪಾಸ್ ಕೇಳಿದ ಹಿನ್ನಲೆ ರಂಜಾನ್ ಹಬ್ಬದ ಹಿಂದೆಯೇ ಮಲ್ಲಿಕ್ ಹಾಗೂ ನನ್ನ ಸಹೋದರ ಮದ್ಯ ಗಲಾಟೆಯಾಗಿತ್ತು, ಇದಕ್ಕೆ ಬೇಸತ್ತು ನನ್ನ ಸಹೋದರ ಇರ್ಫಾನ್ ಆತ್ಮಹತ್ಯೆಗೆ ಯತ್ನಿಸಿ ಒಂದು ವಾರದ ಹಿಂದಯೇ ಆಸ್ಪತ್ರೆಗೆ ದಾಖಲಾಗಿದ್ದ. ಈ ಕುರಿತು ಪೋಲಿಸ್ ಠಾಣೆಗೆ ತೆರಳಿ ಕಂಪ್ಲೇಂಟ್ ಕೊಡಲು ಹೋದಾಗ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಳಿಕ ಮೊನ್ನೆ ಅಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಪುನಃ ಮಲ್ಲಿಕ್ ಬಳಿ ಕೊಟ್ಟ ಹಣ ವಾಪಸ್ ಕೇಳಲು ಹೋದಾಗ ನನ್ನ ಸಹೋದರನ ಮೇಲೆ ಹಲ್ಲೆ ಮಾಡಿದ್ದಾನೆ.
ಒಂದುವೇಳೆ ಪೊಲೀಸರು ನಮ್ಮ ದೂರನ್ನು ಮುಂಚೆಯೇ ಸ್ವೀಕರಿ ವಿಚಾರಣೆ ಮಾಡಿದ್ದರೆ ಇವತ್ತು ಈ ಘಟನೆ ನಡೆಯುತ್ತಿರಲಿಲ್ಲ, ಪೊಲೀಸರ ನಿರ್ಲಕ್ಷವೇ ಈ ಗಲಾಟೆಗೆ ಕಾರಣ ಎಂದು ಗುಲಾಬ್ ಆರೋಪ ಮಾಡಿದ್ದಾನೆ.