ಧಾರವಾಡ: ಶಾಂತಿಯ ನಗು ಬೀರುತ್ತಿದ್ದ ಧಾರವಾಡ ನಗರ ಇಂದು ಮತ್ತೆ ಅಶಾಂತದ ತಿರುವು ಪಡೆದಿದೆ. ನಗರದ ಕಂಠಿಗಲ್ಲಿಯಲ್ಲಿ ಹಾಡಹಗಲೇ ಚೂರಿ ಇರಿತದ ಘಟನೆ ನಡೆದಿದೆ.

ಮಹಾಂತೇಶ ಎಂಬ ವ್ಯಕ್ತಿಗೆ ಮಲ್ಲಿಕ್ ಎಂಬ ಯುವಕ ಹತ್ತು ಸಾವಿರ ರುಪಾಯಿ ಹಣ ನೀಡಿದ್ದ, ಹಣ ವಾಪಸ್ ಕೇಳಲು ಮನೆಗೆ ಹೋದ ಮಲ್ಲಿಕ್ ಹಾಗೂ ಮಹಾಂತೇಶನ ಸಹೋದರ ರಾಘವೇಂದ್ರ ಗಾಯಕವಾಡ್ ಹಾಗೂ ಮಲ್ಲಿಕ್ ನಡುವೆ ಜಗಳವಾಗಿದೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ರಾಘವೇಂದ್ರನ ಬೆನ್ನಿಗೆ ಮಲ್ಲಿಕ್ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಘವೇಂದ್ರನನ್ನು ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಲಾಗಿದೆ.

ಘಟನೆ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ. ಆದರೆ ಈ ದಾಳಿಯ ನಿಖರ ಮಾಹಿತಿ ಏನೆಂಬುದು ಪೊಲೀಸರ ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿಗೆ.
ಒಟ್ಟಿನಲ್ಲಿ ದಿನೆ ದಿನೆ ಹಳೇ ವೈಷಮ್ಯ ಹಾಗೂ ಕ್ಷುಲಕ ಕಾರಣಕ್ಕಾಗಿ ಇಂತಹ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು ಪೊಲೀಸರ ಭಯವೇ ಇಲ್ಲದಂತಾಗಿಗೆ. ಇದರಿಂದಾಗಿ ಸಾರ್ವಜನಿಕರ ವಲಯದಲ್ಲಿ ಕಾನೂನು ಸುವ್ಯವಸ್ಥೆಯ ಮೇಲೆ ನಂಬಿಕೆಯೇ ಇಲ್ಲದಂತಾಗಿರುವುದು ಸುಳ್ಳಲ್ಲ.