ಹುಬ್ಬಳ್ಳಿ: ನಗರದ ಹೃದಯಭಾಗದಲ್ಲಿರುವ ಜನತಾ ಬಜಾರ್ನಲ್ಲಿ ಕ್ಷುಲಕ ಕಾರಣಕ್ಕೆ ಆರಂಭವಾದ ವಾದವಿವಾದ ಜಗಳ, ಮಾರಣಾಂತಿಕ ಹಲ್ಲೆಗೆ ತಿರುಗಿದ್ದು, ವ್ಯಾಪಾರಸ್ಥನೊಬ್ಬನ ತಲೆಮೇಲೆ ಭೀಕರವಾಗಿ ಹಲ್ಲೆ ಮಾಡಿದ ಘಟನೆ ನಡೆದಿದೆ.
ಅಫ್ಜಲ್ ಸನದಿ ಗಾಯಗೊಂಡ ವ್ಯಕ್ತಿ. ಜನತಾ ಬಜಾರ್ ನಲ್ಲಿ ಹೂವಿನ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದನು, ಇವನ ಪಕ್ಕದ ಅಂಗಡಿಯಲ್ಲಿ ಎಲೆ-ಅಡಿಕೆ ವ್ಯಾಪಾರ ಮಾಡುತ್ತಿದ್ದ ಗುಲಾಬ ಎಂಬ ಯುವಕನೊಂದಿಗೆ ಕ್ಷುಲಕ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ಗುಲಾಬ ಅಫ್ಜಲ್ನ ತಲೆಗೆ ಭೀಕರವಾಗಿ ಹೊಡೆದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಫ್ಜಲ್ ನನ್ನು ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ಉಪನಗರ ಠಾಣೆಯ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಗುಲಾಬನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ.
ಒಟ್ಟಿನಲ್ಲಿ ತೀರಾ ಕ್ಷುಲಕ ಕಾರಣಕ್ಕೆ ಈ ರೀತಿಯ ಅಪರಾದ ಘಟನೆಗಳು ನಡೆಯುತ್ತಿರುವುದು ನೋಡಿದರೆ ಅಪರಾಧಿಗಳ ಧೈರ್ಯ, ಮತ್ತು ಕಾನೂನು ಭಯವಿಲ್ಲದ ಮನಸ್ಥಿತಿಯನ್ನು ಹತ್ತಿಕ್ಕಬೇಕಾದ ಅಗತ್ಯ ಇನ್ನೂ ಇದೆ ಎಂದು ಪೊಲೀಸರಿಗೆ ಸೂಚಿಸುತ್ತಿದೆ.
ಸದ್ಯ ಪೊಲೀಸರ ವಶದಲ್ಲಿರುವ ಆರೋಪಿಯ ಹಿಂದಿನ ಹಿನ್ನೆಲೆ, ಇಬ್ಬರ ನಡುವಿನ ವೈಷಮ್ಯ ಹಾಗೂ ಈ ಹಲ್ಲೆಯ ಹಿಂದೆ ಇನ್ನೇನು ಕಾರಣವಿದೆ ಎಂಬುದರ ಬಗ್ಗೆ ವಿಚಾರಣೆ ಮುಂದುವರಿಸಿದ್ದಾರೆ.