ಹುಬ್ಬಳ್ಳಿ ಬ್ರೇಕಿಂಗ್ ನ್ಯೂಸ್:ಹುಬ್ಬಳ್ಳಿಯಲ್ಲಿ (ಇಡಿ) ಅಧಿಕಾರಿಗಳಿಂದ ಹವಾಲಾ ಕಿಂಗ್ಪಿನ್ ಎಂದು ಕರೆಯಲ್ಪಡುವ ಸಮುಂದರ್ ಸಿಂಗ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯ ದೇಶಪಾಂಡೆ ನಗರದ ಕಾಮಾಕ್ಷಿ ಅಪಾರ್ಟ್ಮೆಂಟ್ನ 401 ಮತ್ತು 402ನೇ ಫ್ಲ್ಯಾಟ್ಗಳು ಸೇರಿದಂತೆ ಐದನೇ ಮಹಡಿಯಲ್ಲಿ ಇರುವ ಸಮುಂದರ್ ಸಿಂಗ್ ಹಾಗೂ ಆತನ ಸಹೋದರರ ಮನೆಗಳ ಮೇಲೆ ದಾಳಿ ನಡೆದಿದೆ.ಗೋವಾದಲ್ಲಿ ಮೆಜೆಸ್ಟಿಕ್ ಫ್ರೈಡ್ ಕ್ಯಾಸಿನೊ ನಡೆಸುತ್ತಿರುವ ಸಮುಂದರ್ ಸಿಂಗ್ ಕೋಟ್ಯಾಂತರ ರೂಪಾಯಿಗಳ ಗೇಮ್ ಆಫ್ ಹಾಗೂ ಕ್ಯಾಸಿನೊ ವ್ಯವಹಾರ ನಡೆಸುತ್ತಿದ್ದಾನೆ ಎನ್ನಲಾಗಿದೆ.
ಇತ್ತೀಚೆಗೆ ಕೋಟ್ಯಾಂತರ ವೆಚ್ಚದಲ್ಲಿ ಮಗಳ ಅದ್ದೂರಿ ವಿವಾಹ ಸಮಾರಂಭವನ್ನು ಆಯೋಜಿಸಿದ್ದ ವಿಚಾರವೂ ಬೆಳಕಿಗೆ ಬಂದಿದೆ.

ಸಮುಂದರ್ ಸಿಂಗ್ ಗೋವಾ, ಶ್ರೀಲಂಕಾ ಹಾಗೂ ದುಬೈಯಲ್ಲಿ ಕ್ಯಾಸಿನೊ ಉದ್ಯಮ ನಡೆಸುತ್ತಿದ್ದಾನೆಂಬ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆಯಲ್ಲಿ 15 ಜನ ಅಧಿಕಾರಿಗಳ ವಿಶೇಷ ತಂಡ ಏಕಕಾಲದಲ್ಲಿ ದಾಳಿ ನಡೆಸಿದೆ.
ದಾಳಿ ವೇಳೆ ಸಮುಂದರ್ ಸಿಂಗ್ ಭಯದಿಂದ ಬಾತ್ ರೂಮ್ನಲ್ಲಿ ಅಡಗಿ ಕುಳಿತಿದ್ದಾನೆ. ಸುಮಾರು ಎರಡು ಗಂಟೆಗಳ ಕಾಲ ಸಮುಂದರ್ ಸಿಂಗ್ ಎದುರಿನ ಪ್ಲಾಟ್ ಬಳಿ ಹೈಡ್ರಾಮಾ ನಡೆದಿತ್ತು. ಮನೆಯಲ್ಲಿ ಯಾರೂ ಇಲ್ಲ ಎಂದು ಸಂಬಂಧಿಕರು ಅಧಿಕಾರಿಗಳನ್ನು ದಾರಿ ತಪ್ಪಿಸಲು ಯತ್ನಿಸಿದ್ದಾರೆ.

ಬಾತ್ ರೂಮ್ನಿಂದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ, ಇಡಿ ಹಾಗೂ ಸಿಆರ್ಪಿಎಫ್ ಅಧಿಕಾರಿಗಳು ಸಿನಿಮಾ ಶೈಲಿಯಲ್ಲಿ ಬಾಗಿಲು ಮುರಿದು ಒಳನುಗ್ಗಿ, ಅಲ್ಲಿ ಅಡಗಿ ಕುಳಿತಿದ್ದ ಸಮುಂದರ್ ಸಿಂಗ್ ನನ್ನು ವಶಕ್ಕೆ ಪಡೆದು ಬೆಳಗಿನ ಐದು ಗಂಟೆಯಿಂದಲೇ ವಿಚಾರಣೆ ನಡೆಸುತ್ತಿದ್ದಾರೆ.