ಹುಬ್ಬಳ್ಳಿಯಲ್ಲಿ ಮನ ಕಲುಕುವ ಘಟನೆ ನಡೆದಿದೆ. ತೋಪಲಗಟ್ಟಿಯ ತಿಪ್ಪೆಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ.
ರಾತ್ರೋ ರಾತ್ರಿ ಹೆತ್ತ ಮಗುವನ್ನೇ ತಿಪ್ಪೆಗೆ ಎಸೆದು ಹೋಗಿರುವ ಪಾಪಿಗಳ ಕೃತ್ಯದಿಂದ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಗೋಕುಲ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯ ತೋಪಲಗಟ್ಟಿಯಲ್ಲಿ ನಡೆದಿದೆ.

ತಿಪ್ಪೆಯಲ್ಲಿ ಶವವನ್ನು ಕಂಡ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಹಾಗೂ ಪಾಲಿಕೆಯವರಿಗೆ ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿಯೇ ಶಿಶುವನ್ನು ತಿಪ್ಪೆಗೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಗೋಕುಲ ರೋಡ್ ಠಾಣೆಯ ಪೊಲೀಸರು ಭೇಟಿ ನೀಡಿ ನವಜಾತ ಶಿಶುವಿನ ಶವವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿ, ತಪ್ಪಿತಸ್ಥರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.