ಹುಬ್ಬಳ್ಳಿ: ನಿಷೇಧಿತ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಇನ್ಸ್ಪೆಕ್ಟರ್ ಮಾರುತಿ ಗುಳ್ಳಾರಿ ನೇತೃತ್ವದ ತಂಡ ಕಂಚಗಾರ ಗಲ್ಲಿಯಲ್ಲಿ ಮಹೇಶ್ ಹಬೀಬ್ ಅನ್ನೋ ಆರೋಪಿಯನ್ನು ಬಂಧನ ಮಾಡಿ ಆತನಿಂದ 410 ಗ್ರಾಂ ಗಾಂಜಾ ವಶಕ್ಕೆ ಪಡೆದು ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಅನಿಲ್ ಹುಗ್ಗಿ, ಐ ಕೆ ಧಾರವಾಡ, ಬಸವರಾಜ್ ಬೆಳಗಾವಿ, ಮಾರುತಿ ಭಜಂತ್ರಿ, ರಾಜು ಗುಂಜಾಳ ಹಾಗೂ ಶಿವು ಕಡಿಮನಿ ಅವರು ಕಾರ್ಯ ನಿರ್ವಹಿಸುತ್ತಿದ್ದು ಇವರು ಕಾರ್ಯಕ್ಕೆ ಪೋಲಿಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.