ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಶನಿವಾರ ಹುಬ್ಬಳ್ಳಿ-ಗದಗ ರಸ್ತೆಯ ರೈಲ್ವೆ ಡಿಸೇಲ್ ಲೋಕೋ ಶೇಡ್ ಹತ್ತಿರ ಸಿಇಎನ್ ಕ್ರೈಂ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯು ಸಿಂಧನೂರು ತಾಲೂಕಿನ ಬಂಗಾಳ ಕ್ಯಾಂಪ್ ನ ನಿವಾಸಿ ಕುಂಬರೇಶ್ ಸರಕಾರ ಎಂದು ತಿಳಿದುಬಂದಿದೆ. ಆರೋಪಿಯು ಮೂಲತ ಒರಿಸ್ಸಾ ರಾಜ್ಯದವನಾಗಿದ್ದು ಈತನಿಂದ 1,06,240 ರೂ.ಮೌಲ್ಯದ 5 ಕೆಜಿ 312 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅನ್ನಪೂರ್ಣ ಆರ್.ಎಮ್ ಮತ್ತು ಅವರ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಖಚಿತ ಮಾಹಿತಿ ಮೇರೆಗೆ ಪ್ರಕರಣ ಬೇಧಿಸಿದ್ದು, ಹು-ಧಾ ಪೊಲೀಸ್ ಕಮೀಷನರ್ ಶ್ಲಾಘಿಸಿದ್ದಾರೆ.
ಘಟನೆ ಕುರಿತಂತೆ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.