ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟ ಖಚಿತ ಮಾಹಿತಿ ಮೇರೆಗೆ ಪೋಲಿಸರು ಕಾರ್ಯಾಚರಣೆ ನಡೆಸಿ ಬರೋಬರಿ 3 ಕೆಜಿ 800 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿರುವ ಘಟನೆ ಶಿರಡಿ ನಗರದಲ್ಲಿ ನಡೆದಿದೆ.
ಅಜೀಜ್ ಬೇಪಾರಿ (27) ಎಂಬಾತ ತಮ್ಮ ನಿವಾಸದಲ್ಲಿ ಅಕ್ರಮವಾಗಿ ಗಾಂಜಾವನ್ನು ಸಂಗ್ರಹ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಇಟ್ಟಿಕೊಂಡಿದ್ದ, ಈ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ಅಶೋಕ ನಗರದ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಕಿರಣಕುಮಾರ ತವರಗ ಅವರ ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ ಪಿ.ಎಂ ಹಾಗೂ ಸಿಬ್ಬಂದಿಗಳಾದ ಧೀರು ಪಮ್ಮಾರ, ಗಣಪತಿ, ಯಶವಂತ ಮೋರಬ್, ರಾಜೇಂದ್ರ ತಂಡ ದಾಳಿ ನಡೆಸಿ ಲಕ್ಷಾಂತರ ರೂಪದಲ್ಲಿ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇನ್ನು ಅಜೀಜ್ ಬೇಪಾರ ಈ ಹಿಂದೆ ವಿದ್ಯಾನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸ್ವೀರಿಟ್ ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದನು. ಆದರೂ ಸಹಿತ ತಪ್ಪನ್ನು ತಿದ್ದಿಕೊಳ್ಳದೇ ಹಳೆಯ ಚಾಳಿ ಮುಂದುವರೆಸಿ ಇದೀಗ ಮತ್ತೊಮ್ಮೆ ಪೋಲಿಸರ ಅತಿಥಿಯಾಗಿದ್ದಾನೆ.