ಹುಬ್ಬಳ್ಳಿ: ಹು-ಧಾ ಅವಳಿನಗರದಲ್ಲಿ ಗಾಂಜಾ ಮಾರಾಟ, ಸಾಗಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹುಬ್ಬಳ್ಳಿ – ಧಾರವಾಡ ಪೋಲಿಸರು ಅಭಿಯಾನ ಆರಂಭಿಸಿದ್ದಾರೆ.
ಅದರಂತೆ ಇಂದು CEN ಪೋಲಿಸರು ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಜನಜಂಗುಳಿ ಪ್ರದೇಶದಲ್ಲಿ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ನೇತೃತ್ವದಲ್ಲಿ ಅನುಮಾನಸ್ಪದ ಜನರನ್ನು ತಡೆದು ಶ್ವಾನದಳದಿಂದ ತಪಾಸಣೆ ನಡೆಸಿದರು.
ಈ ವೇಳೆ ಸಾರ್ವಜನಿಕರಿಗೆ ಗಾಂಜಾ ಮಾರಾಟ ಹಾಗೂ ಸಾಗಾಟ ಕಂಡು ಬಂದಲ್ಲಿ, ಸ್ಥಳೀಯ ಪೋಲಿಸರು ಇಲ್ಲವೇ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.
ಈ ಮೂಲಕ ಅವಳಿನಗರದಲ್ಲಿ ಗಾಂಜಾ ತಡೆಯಲು ಸಹಕರಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಸಿಇಎನ್ ಪೋಲಿಸ್ ಸಿಬ್ಬಂದಿ, ಶ್ವಾನದಳದ ಸಿಬ್ಬಂದಿ, ಕೆ ಎಸ್ ಆರ್ ಟಿ ಸಿ ಡಿಸಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.