ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊರ್ವನಿಗೆ ತಲ್ವಾರ್ ಹಾಕಿರುವ ಘಟನೆ ಹಳೇಹುಬ್ಬಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈಗಷ್ಟೇ ಜರುಗಿದೆ.
ಇಲ್ಲಿನ ಬೀರಬಂಧ ಓಣಿಯಲ್ಲಿ ಈ ವೊಂದು ಘಟನೆ ನಡೆದಿದ್ದು, ಕೈಯುಮ ಬೆಟಗೇರಿ ಎಂಬಾತನಿಗೆ ಕಟ್ಟಿಗೆಯಿಂದ ತಲೆ ಬಾಗಕ್ಕೆ ಹಲ್ಲೆ ಮಾಡಲಾಗಿದ್ದು, ಈತನ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಈತನನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹಳೇಹುಬ್ಬಳ್ಳಿ ಪೋಲಿಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.