ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಪರಾಧ ಕೃತ್ಯಗಳು ಸೇರಿದಂತೆ ಅಕ್ರಮ ಚಟುವಟಿಕೆಗಳ ಸಂಖ್ಯೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಹು-ಧಾ ಪೊಲೀಸ್ ಕಮೀಷನರೇಟ್ ನಿಂದ ಸಾರ್ವಜನಿಕರಿಗೆ ಬುಧವಾರ ಜಾಗೃತಿ ಮೂಡಿಸಲಾಯಿತು.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಬಾಂತಿಕಟ್ಟಿ ಸರ್ಕಲ್, ಬೀರಬಂದ್ ಸರ್ಕಲ್ ಸೇರಿದಂತೆ ವಿವಿಧೆಡೆ ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರ ನೇತೃತ್ವದ ತಂಡ ಸಾರ್ವಜನಿಕರನ್ನು ಒಂದಡೆ ಸೇರಿಸಿ ಅಪರಾಧ ಕೃತ್ಯಗಳು, ಮಹಿಳೆಯರ ಮೇಲಿನ ದೌರ್ಜನ್ಯ, ಗಾಂಜಾ,ಡ್ರಗ್ಸ್ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ನೇಹಾ ಹಾಗೂ ಅಂಜಲಿ ಹತ್ಯೆ ಪ್ರಕರಣದ ಹಿನ್ನಲೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಇನ್ನೂ ಹು-ಧಾ ಅವಳಿನಗರದಲ್ಲಿ ರೌಡಿ ಶೀಟರ್ ಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸುವ ಮೂಲಕ ರೌಡಿ ಶೀಟರ್ ಗಳ ಮಾಹಿತಿಯನ್ನು ಕಲೆ ಹಾಕಿದ್ದು, ರೌಡಿ ಶೀಟರ್ ಗಳಿಗೆ ಅಪರಾಧಗಳಂತ ಕೃತ್ಯಗಳಿಗೆ ಆಸ್ಪದ ನೀಡಬಾರದು ಒಂದು ವೇಳೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೇ ಮುಲಾಜಿಲ್ಲದೆ ಕಾನೂನು ಕ್ರಮವನ್ನು ಜರುಗಿಸುವುದಾಗಿ ಸೂಚನೆಯನ್ನು ನೀಡಿದ್ದಾರೆ.