ಹುಬ್ಬಳ್ಳಿ: ಗಾಂಜಾ, ಡ್ರಗ್ಸ್ ನಿಂದಾಗಿ ಯುವ ಸಮುದಾಯ ಬಲಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಗಾಂಜಾ, ಡ್ರಗ್ಸ್ ಘಾಟು ಅಂತ್ಯಗೊಳಿಸಲು ಹು-ಧಾ ಮಹಾನಗರ ಕಮೀಷನರೇಟ್ ಪಣ ತೊಟ್ಟಿದೆ. ಈ ಹಿನ್ನಲೆಯಲ್ಲಿ ಭಾನುವಾರ ಹು-ಧಾ ಅವಳಿನಗರದಲ್ಲಿ ಏಕಕಾಲದಲ್ಲಿ ಪೊಲೀಸರು ಗಾಂಜಾ ಹಾಗೂ ಡ್ರಗ್ಸ್ ವ್ಯಸನಿಗಳನ್ನು ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಲಾಯಿತು.
ಇದೇ ವೇಳೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ, ಧಾರವಾಡ ಜಿಲ್ಲಾಸ್ಪತ್ರೆ ಹಾಗೂ ಧಾರವಾಡ ಮಾನಸಿಕ ಆಸ್ಪತ್ರೆಯಲ್ಲಿ ಪೊಲೀಸ್ ಬಂದೋಬಸ್ತ್ ನಲ್ಲಿ ಶಂಕಿತ ಮಾದಕ ವಸ್ತುಗಳ ವ್ಯಸನಿಗಳಿಗೆ ಪರೀಕ್ಷೆ ನಡೆಸಲಾಯಿತು. ಹು-ಧಾ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ಗಾಂಜಾ ವ್ಯಸನಿಗಳ ಪಾಲಕರೊಂದಿಗೆ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಪೊಲೀಸರು ಸಭೆ ನಡೆಸಿದ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳು ಮಾದಕ ವಸ್ತುಗಳ ವ್ಯಸನಿಯಾಗಿದ್ದಾರೆಂಬ ವಿಷಯ ತಿಳಿದು ಕಣ್ಣೀರು ಹಾಕಿರುವ ಪ್ರಸಂಗ ಜರುಗಿತು. ಇದೇ ವೇಳೆ ಡ್ರಗ್ಸ್ ಅಡಿಕ್ಟ್ ಆಗಿರುವ ಯುವಕರಿಗೆ ಎಚ್ಚರಿಕೆಯನ್ನು ಪೊಲೀಸ್ ಕಮೀಷನರ್ ನೀಡಿದ್ದಾರೆ.
ಅವಳಿನಗರದಲ್ಲಿ 400 ಕ್ಕೂ ಜನರಿಗೆ ಜನರಿಗೆ ತಪಾಸಣೆ ನಡೆಸಲಾಗಿದ್ದು, ಅಪ್ರಾಪ್ತರನ್ನು ಸೇರಿ 255 ಕ್ಕೂ ಹೆಚ್ಚು ಜನರು ಮಾದಕವಸ್ತುಗಳನ್ನು ಸೇವೆನೆ ಮಾಡುತ್ತಿದ್ದಾರೆಂಬುದು ದೃಢಪಟ್ಟಿದ್ದು, ಮಾದಕವಸ್ತು ವ್ಯಸನಿಗಳಿಗೆ ಎಚ್ಚರಿಕೆ ಸಂದೇಶವನ್ನು ಪೊಲೀಸ್ ಕಮೀಷನರೇಟ್ ನೀಡಿದೆ.
ಹು-ಧಾ ಅವಳಿನಗರದಲ್ಲಿ ಇತ್ತೀಚಿಗೆ 100 ಕ್ಕೂ ಹೆಚ್ಚು ಗಾಂಜಾ ಮಾರಾಟಗಾರರನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದರು, ಆದರೇ ಇದೀಗ ಅದರೊಟ್ಟಿಗೆ ಮಾದಕ ವ್ಯಸನಿಗಳನ್ನು ಪೊಲೀಸ್ ಕಮೀಷನರ್ ಟಾರ್ಗೆಟ್ ಮಾಡಿದ್ದಾರೆ.
ಒಟ್ಟಾರೆಯಾಗಿ ವಾಣಿಜ್ಯ ನಗರಿ ಹುಬ್ಬಳ್ಳಿ, ಶಿಕ್ಷಣ ಕಾಶಿ ಧಾರವಾಡದ ಅವಳಿನಗರದಲ್ಲಿ ಮಾದಕವಸ್ತುಗಳಿಂದ ಮುಕ್ತಗೊಳಿಸಬೇಕೆಂದು ಪಣತೊಟ್ಟು ಚಕ್ರವ್ಯೂಹ ರಚಿಸುತ್ತಿರುವ ಪೊಲೀಸ್ ಕಮೀಷನರ್ ನಡೆಗೆ ಹು-ಧಾ ಅವಳಿನಗರದ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದು, ಮಾದಕವಸ್ತುಗಳ ಘಾಟಿಗೆ ಪೊಲೀಸರು ಫುಲ್ ಸ್ಟಾಪ್ ಇಡಬೇಕೆಂಬುದು ಸಾರ್ವಜನಿಕರು ಹಾಗೂ ನಮ್ಮ ಕರ್ನಾಟಕ ಪಬ್ಲಿಕ್ ವಾಯ್ಸ್ ವಾಹಿನಿಯ ಅನಂತ ವಿನಂತಿಯಾಗಿದೆ.