ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಇರುವ ಪೋಲಿಸ್ ಔಟ್ ಪೋಸ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೋಲಿಸ್ ಸಿಬ್ಬಂದಿ ಮೇಲೆ ಯುವಕನೋರ್ವ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಕಿಮ್ಸ್ ನ ಹೊರ ರೋಗಿಗಳ ಆಸ್ಪತ್ರೆ ಬಳಿ ಶೇಂಗಾ ಮಾರುತಿದ್ದ ವ್ಯಕ್ತಿಯ ಜೊತೆ ಯುವಕನೋರ್ವ ಏರು ದ್ವನಿಯಲ್ಲಿ ವಾಗ್ವಾದ ಮಾಡುತಿದ್ದ. ಈ ಸಂದರ್ಭದಲ್ಲಿ ಅಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಪೋಲಿಸ್ ಪೇದೆ ಆತನನ್ನ ಪ್ರಶ್ನೆ ಮಾಡಿದಕ್ಕೆ ಅವರ ಮೇಲೇನೆ ಹಲ್ಲೆ ಮಾಡಿದ್ದಾನೆ, ನಾನು ಪೋಲಿಸ್ ಅಂತ ಹೇಳಿದರು ಕೂಡ ಕ್ಯಾರೆ ಎನ್ನದೇ ಮನಸೋ ಇಚ್ಛೆ ಪೊಲೀಸ್ ಪೇದೆಯನ್ನು ಥಳಿಸಿದ್ದಾನೆ.
ಇನ್ನು ಘಟನೆ ನಡೆದ ಸ್ಥಳದಲ್ಲಿ ಯಾರೊಬ್ಬರೂ ಸಹಾಯಕ್ಕೆ ಬಾರದೆ ಇರುವುದು ಅಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಅಲ್ದೆ ಸಾರ್ವಜನಿಕರಿಗೆ ರಕ್ಷಣೆ ನೀಡುವ ಪೊಲೀಸರ ಮೇಲೆಯೇ ಈ ರೀತಿ ದೌರ್ಜನ್ಯಗಳು ನಡೆಯುತ್ತಿದ್ದು, ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇನ್ನು ರಕ್ಷಕ ಪೊಲೀಸ್ ಪೇದೆಯ ಮೇಲೆಯೇ ಏಕಾ ಏಕಿ ಹಲ್ಲೆ ನಡೆಸಿರುವ ವ್ಯಕ್ತಿ ಸ್ವತಃ ಪೋಲಿಸ್ ಸಿಬ್ಬಂದಿ ಕಿಮ್ಸ್ ನ ಪೋಲಿಸ್ ಚೌಕಿಗೆ ಕರೆತಂದು ಹೊಯ್ಸಳಕ್ಕೆ ಕರೆ ಮಾಡಿ, ಹಲ್ಲೆ ನಡೆಸಿರುವ ಯುವಕನನ್ನು ಕೂಡಲೇ ಬಂಧನ ಮಾಡಿ ಆತನನ್ನು ವಿದ್ಯಾನಗರ ಪೋಲಿಸ್ ಠಾಣೆಗೆ ಕರೆದೊಯ್ದಿದ್ದು, ಆರೋಪಿಯ ವಿಚಾರಣೆ ನಡೆಸಿದ್ದಾರೆ.
ಅದೇನೇ ಇರ್ಲಿ ಸಾರ್ವಜನಿಕರ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂಧಿಗಳಿಗೆ ಸಹಕಾರ ನೀಡಬೇಕಿದ್ದ ನಾಗರೀಕರೇ ಈರೀತಿ ಮೃಗೀಯ ವರ್ತನೆ ಮಾಡಿರುವುದು ನಿಜಕ್ಕೂ ದುರ್ದೈವದ ಸಂಗತಿ. ಇನ್ನಾದ್ರೂ ಈ ರೀತಿ ಘಟನೆಗಳು ಮರುಕಳಿಸದಂತೆ ಸಾರ್ವಜನಿಕರು ಮಾನವೀಯ ಮೌಲ್ಯಗಳನ್ನ ಉಳಿಸಿಕೊಳ್ಳಲಿ ಅನ್ನೋದು ನಮ್ಮ ಆಶಯ.