ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಹಾವಳಿ ಹೆಚ್ಚಾಗಿದ್ದು, ಬೆಟ್ಟಿಂಗ್ ಆ್ಯಪ್ ಬಳಸಿ ಹದಿಹರೆಯದ ಯುವಕರು ಲಾಭದ ಆಸೆಗಾಗಿ ದುಡಿದ ದುಡ್ಡನ್ನು ಬೆಟ್ಟಿಂಗ್ ಆ್ಯಪ್\’ಗಳಿಗೆ ಹಾಕಿ, ಸಾಲಸೋಲಕ್ಕೆ ಸಿಲುಕಿ, ಮನೆ ಮಠ ಕಳೆದುಕೊಳ್ಳುವಂತಾಗಿದೆ. ಇಂತಹ ಬೆಟ್ಟಿಂಗ್ ದಂಧೆಗಳಿಗೆ ಕಡಿವಾಣ ಹಾಕಲು ದಕ್ಷ ಪೋಲಿಸ್ ಅಧಿಕಾರಿ ರೇಣುಕಾ ಸುಕುಮಾರ ತಮ್ಮ ಸಿಬ್ಬಂದಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಆದರೆ ಇದೀಗ ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲವು ರಕ್ಷಕರು ಬೆಟ್ಟಿಂಗ್ ದಂಧೆಗಳಿಗೆ ಕಡಿವಾಣ ಹಾಕುವ ಬದಲು ಕಿಂಗ್ ಪಿನ್\’ಗಳೊಂದಿಗೆ ಕೈಕುಲುಕುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ.
ಇದೀಗ ಈ ಆರೋಪಕ್ಕೆ ಪುಷ್ಟೀಕರಣ ನೀಡುವಂತೆ ಗೋವಾದಿಂದ ಬೆಟ್ಟಿಂಗ್ ಜಾಲವನ್ನು ಬೇಧಿಸಲು ಹೋಗಿದ್ದ ಖಾಕಿ ಟೀಮ್ ವಾಪಾಸ್ ಬರುವಾಗ ಪ್ರಸಾದ್ ತೆಗೆದುಕೊಂಡು ಬಂದ ಸದ್ದು ಇದೀಗ ಫೀಶ್ ಮಾರುಕಟ್ಟೆ ಸುತ್ತಮುತ್ತ ಹಬ್ಬಿದೆ.
ಅಂದ ಹಾಗೇ ನಗರದ ಖ್ಯಾತ ಉದ್ಯಮಿ ವಾಣಿಜ್ಯ ನಗರಿಯ ಯುವಕರಲ್ಲಿ ಬೆಟ್ಟಿಂಗ್ ಹುಚ್ಚು ಹಿಡಿಸಿದ್ದಾನೆ. ಹೀಗಾಗಿ ಈ ಬಗ್ಗೆ ಸುಳಿವು ಸಿಗುತ್ತಿದ್ದಂತೆಯೇ ಅಲರ್ಟ್ ಆಗಿದ್ದ ಖಾಕಿ ಈ ಬೆಟ್ಟಿಂಗ್ ಹಾವಳಿಗೆ ಅಂತ್ಯ ಹಾಡಬೇಕೆಂದು ಮುಂದಾಗತ್ತಾರೆ.
ಎದೆಯ ಮೇಲೆ ಎರಡು ಸ್ಟಾರ್ ಹಾಕಿಕೊಂಡ ಅಧಿಕಾರಿ ಹಾಗೂ ಮತ್ತವರ ಸಿಬ್ಬಂದಿ ಬೆಟ್ಟಿಂಗ್ ಕಿಂಗ್ ಪಿನ್\’ಗಳ ಹೆಡೆಮುರಿ ಕಟ್ಟಲು ಎರಡು ತಂಡಗಳಾಗಿ ದೂರದ ಗೋವಾಕ್ಕೆ ಹೋಗತ್ತಾರೆ.
ಅಲ್ಲಿ ಇನ್ನೇನು ಬೆಟ್ಟಿಂಗ್ ಕಿಂಗ್ ಪಿನ್\’ಗಳು ಅಂದರ್ ಆದರೂ ಅನುವಷ್ಟರಲ್ಲಿ, ಖಾಕಿ ಬೇರೆ ವ್ಯವಹಾರ ಮಾಡಿಕೊಂಡು ಮರಳಿ ಪ್ರಸಾದ್ ಪಡೆದು ವಾಪಾಸ್ ಬಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಹಿರಿಯ ಅಧಿಕಾರಗಳಿಗೆ ಮಾಹಿತಿ ಇದೆಯೋ? ಇಲ್ವೋ? ಗೊತ್ತಿಲ್ಲ, ಈಗಲಾದರೂ ಹಿರಿಯ ಅಧಿಕಾರಿಗಳು ಖಾಕಿಗೆ ಕಪ್ಪುಚುಕ್ಕೆ ತರುತ್ತಿರುವ ಸಿಬ್ಬಂದಿಗಳನ್ನು ಕರೆದು ಮಾಹಿತಿ ಕೇಳತ್ತಾರೋ? ಇಲ್ವೋ ಕಾದು ನೋಡೋಣ.