ಪಾಲಿಕೆ ಸದಸ್ಯ ನಿರಂಜನ್ ಹೀರೆಮಠ್ ಅವರ ಪಿಎ (PA) ವಿಜಯ್ ( ಈರಣ್ಣ ) ನನ್ನು ಇಂದು ಮುಂಜಾನೆ ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಬೆಳಿಗ್ಗೆ 5 ಗಂಟೆ ಸುಮಾರಿಗೆ ಕರೆಂಟ್ ಬಾಕ್ಸ್ ಬಂದ್ ಮಾಡಲು ವಾಲ್ವೇಕರ್ ಗಲ್ಲಿ ಗಜಾನನ ಬ್ಯಾಂಕ್ ಎದುರುಗಡೆ ವಿಜಯ್ ಹೋದಾಗ ಅಲ್ಲಿ ಮೂರು ಜನ ಕಾರಲ್ಲಿ ಬಂದು ಕಾರ್ ಹತ್ತಲು ಹೇಳಿದ್ದಾರಂತೆ, ನಾನು ಯಾಕೆ ಕಾರ್ ಹತ್ತುಬೇಕೆಂದು ವಿಜಯ್ ಬಯಭಿತಕೊಂಡು ಜೇಬಿನಲ್ಲಿದ್ದ ಮೊಬೈಲ್ ತೆಗೆದು ವಿಡಿಯೋ ಮಾಡಲು ಮುಂದಾಗಿದ್ದಾನೆ, ಆಗ ಕಾರಿನಲ್ಲಿ ಬಂದವರು ವಿಜಯ್ ನನ್ನು ಹಿಡಿಯಲು ಬಂದರಂತೆ ಆಗ ವಿಜಯ್ ಅವರ ಕೈಯಿಂದ ತಪ್ಪಿಸಿಕೊಂಡ ಓಡಿದ್ದಾನೆ ಎನ್ನಲಾಗಿದೆ.
ಬಳಿಕ 112 ನಂಬರ್ ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ, ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಜಯ್ ನನ್ನು ಸೇಫ್ ಮಾಡಿ ಆದ ಘಟನೆಯ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ಅಲ್ಲೇ ಇರುವ ಬ್ಯಾಂಕ್ ಒಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆಯೇ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಿಡ್ನಾಪ್ ಮಾಡಲು ಬಂದವರು ಯಾರು? ಯಾವ ಕಾರಣಕ್ಕೆ ಕಿಡ್ನಾಪ್ ಮಾಡಲು ಯತ್ನಿಸಿದರು? ಇದೆಲ್ಲದರ ಉತ್ತರ ಪೊಲೀಸರ ತನಿಖೆ ಬಳಿಕವೇ ತಿಳಿದು ಬರಬೇಕಿದೆ…
ಈ ಕುರಿತು ಘಂಟಿಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.