ಹುಬ್ಬಳ್ಳಿ: ನಗರದಲ್ಲಿ ಇತ್ತೀಚೆಗೆ ನಡೆದ ಅಫ್ತಾಬ್ ಕರಡಿಗುಡ್ಡ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಪಕ್ಕಾ ಫ್ರಿ ಪ್ಲಾನ್, ಅಂತ ಅಫ್ತಾಬ್ ನ ತಾಯಿ ಆರೋಪಿಸಿದ್ದಾರೆ.
ಹೌದು… ಕಳೆದ ಮೂರು ದಿನಗಳ ಹಿಂದೆ ನಡೆದ ರೌಡಿ ಶೀಟರ್ ಅಫ್ತಾಬ್ ಕರಡಿಗುಡ್ಡ ನನ್ನು ಬಂಧನ ಮಾಡಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಅಂತ ಆತನ ಕಾಲಿಗೆ ಗುಂಡು ಹೊಡೆದು ಬಂಧನ ಮಾಡಿರುವುದಾಗಿ ಮಾದ್ಯಮದಲ್ಲಿ ಪ್ರಸಾರವಾಗಿತ್ತು. ಆದರೆ ಅಫ್ತಾಬ್ ತಾಯಿ ಇದು ಒಂದು ಷಡ್ಯಂತ್ರ ಅಂತ ಆರೋಪಿಸಿದ್ದಾರೆ.
ನನ್ನ ಮಗ ಒಬ್ಬ ರೌಡಿ ನಾವು ಓಪಿಕೊಳ್ಳುತ್ತೇವೆ, ಆದರೆ ನೂತನವಾಗಿ ಅಧಿಕಾರವಹಿಸಿಕೊಂಡ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ್ ಬಂದ ಮೇಲೆ ನನ್ನ ಮಗ ಅವರ ಕಾರ್ಯಕ್ಕೆ ಹೆದರಿ ಯಾವುದೇ ತಂಟೆಗೆ ಹೋಗುತ್ತಿರಲಿಲ್ಲ, ಆದರೆ ಮೊನ್ನೆಯ ದಿನ ಗಾಂಜಾ ನಶೆಯಲ್ಲಿ ಬಂದ ಜಾವೂರ್ ನನ್ನ ಮಗನ ಜೊತೆ ಜಗಳವಾಡಿ ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾನೆ, ಇದಕ್ಕೆ ನನ್ನ ಮಗನೂ ಕೂಡ ಆತನಿಗೆ ತಳಿಸಿದ್ದಾನೆ, ಇದಕ್ಕೆ ಸಂಬಂಧಿಸಿದಂತೆ ಕಸಬಾಪೇಟ್ ಪೊಲೀಸರು ನಮ್ಮ ಮನೆಗೆ ಬಂದು ನನ್ನ ಮಗನನ್ನು ಕರೆದ್ವದಿದ್ದಾರೆ, ಹಾಗೂ ನನ್ನ ಇನ್ನೊಬ್ಬ ಮಗನನ್ನು ಆತನ ಅಜ್ಜಿಯ ಮನೆಯಿಂದ ಕರೆದುಕೊಂಡು ಹೋಗಿದ್ದಾರೆ.
ಆದರೆ ಮಾದ್ಯಮದಲ್ಲಿ ನನ್ನ ಮಗನನ್ನು ಬೇರೆ ಸ್ಥಳದಲ್ಲಿ ಬಂಧನ ಮಾಡಲು ಹೋಗಿ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಅಂತ ಅವನ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಅಂತ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕಸಬಾಪೇಟ್ ಠಾಣೆಯ ಪೊಲೀಸರು ಉದ್ದೇಶಪೂರ್ವಕವಾಗಿ ನನ್ನ ಮಗನ ಮೇಲೆ ಗುಂಡು ಹಾರಿಸಿದ್ದಾರೆ.ಗ್ಯಾಂಗ್ ವಾರ್ ಹಿನ್ನೆಲೆಯಲ್ಲಿ ನನ್ನ ಮಗನ ಮೇಲೆ ಅನಾವಶ್ಯಕವಾಗಿ ಶೂಟೌಟ್ ಮಾಡಲಾಗಿದೆ ಅಂತಾ ಅಫ್ತಾಬ್ ಕರಡಿಗುಡ್ಡನ ತಾಯಿ ಪೊಲೀಸರ ಮೇಲೆಯೇ ಗಂಭೀರವಾಗಿ ಆರೋಪಿಸಿದ್ದಾರೆ. ಅಂದು ರಾತ್ರಿ ಮನೆಯಲ್ಲಿದ್ದ ನನ್ನ ಮಗನನ್ನ ಏಕಾಏಕಿ ಕರೆದೊಯ್ದು ಗ್ಯಾಂಗ್ ವಾರ್ ಹೆಸರಿನಲ್ಲಿ ಶೂಟೌಟ್ ಮಾಡಲಾಗಿದೆ. ಈ ವೇಳೆ ನನ್ನ ಮಗನನ್ನ ಕರೆದೊಯ್ಯುವಾಗ ನಾವು ಎಷ್ಟೇ ಕೇಳಿಕೊಂಡರೂ ನಮ್ಮ ಕುಟುಂಬಸ್ಥರಿಗೂ ಬೆದರಿಕೆ ಹಾಕಿ ನನ್ನ ಮಗ ಅಫ್ತಾಬ್ ನನ್ನ ಎಳೆದೊಯ್ದಿದ್ದಾರೆ. ಅದಾದ ನಂತರ ಆತನ ಕಾಲಿಗೆ ಗುಂಡೇಟು ಹಾಕುವ ಮೂಲಕ ಗ್ಯಾಂಗ್ ವಾರ್ ಕಥೆ ಕಟ್ಟಿದ್ದಾರೆ ಅಂತಾ ಅಫ್ತಾಬ್ ತಾಯಿ ಹಾಗೂ ಪತ್ನಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ಮು ಈ ಕುರಿತು ಮಾದ್ಯಮಗಳ ಎದುರು ಕಣ್ಣೀರು ಹಾಕಿರೋ ಅಫ್ತಾಬ್ ತಾಯಿ ಹಾಗೂ ಪತ್ನಿ ಕಾನೂನನ್ನು ಕಾನೂನು ಬದ್ಧವಾಗಿ ಉಪಯೋಗಿಸಬೇಕು, ಅದು ಬಿಟ್ಟು ಜನರ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು ಹಾಗೂ ನನ್ನ ಮಗನಿಗೆ ನ್ಯಾಯ ಒದಗಿಸಿ ಕೊಡುವಂತೆ ಆಗ್ರಹಿಸಿದ್ದಾರೆ.
ಅಫ್ತಾಬ್ ತಾಯಿ ಹೇಳಿಕೆಗೆ ಪೋಲಿಸ್ ಕಮಿಷನರ್ ಅವರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಅಫ್ತಾಬ್ ನ ಮೇಲೆ ಹಿಂದೆ ಕೂಡ ಪ್ರಕರಣ ದಾಖಲಾಗಿವೆ, ಮೊನ್ನೆ ಕೂಡ ಜಾವೂರ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಅವನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ, ಆಯಾ ಸಮಯದಲ್ಲಿ ಕಾಲಿಗೆ ಗುಂಡು ಹಾರಿಸಿದ್ದೇವೆ, ಇದನ್ನ ಸಹಿಸದ ಹೆತ್ತ ಕರುಳು ಸಹಜ ರೀತಿಯಲ್ಲಿ ಮಾತನಾಡಿದ್ದಾರೆ, ಆದರೆ ಅವರ ತಂದೆಗೆ ಬೇಟಿ ಮಾಡಿದ್ದಾಗ ಅವರ ಮಗನ ಬಗ್ಗೆ ನಗನೆ ವಿವರಣೆ ನೀಡಿದ್ದಾರೆ, ಆದರೆ ಅವರ ತಾಯಿ ಪೊಲೀಸರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ಮಾತು. ದುಡ್ಡು ಕೇಳುತ್ತಾರೆ ಅನ್ನೋ ವಿಚಾರಕ್ಕೆ ಹೇಳಿಕೆ ನೀಡಿರುವ ಅವರು ಯಾಕೆ ಈ ವಿಷಯ ಪೋಲಿಸ್ ಹಿರಿಯ ಅಧಿಕಾರಿಗಳ ಗಮಕ್ಕೆ ತಂದಿಲ್ಲ, ಮಗನ ಬಂಧನದ ನೋವಿಗೆ ಇತರ ಹೇಳಿಕೆ ನೀಡೋದು ಸರಿ ಅಲ್ಲ ಅಂತ ಹೇಳಿದ್ದಾರೆ.