ಹುಬ್ಬಳ್ಳಿ: ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಬಾಲಕ ಸೇರಿ ಆರು ಜನರನ್ನು ಬಂಧಿಸುವಲ್ಲಿ ಸಿಇಎನ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಅಂದಾಜು 2.8 ಲಕ್ಷ ರೂ. ಮೌಲ್ಯದ 2.8 ಕೆಜಿ ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರು ಹುಬ್ಬಳ್ಳಿ ನಿವಾಸಿಗಳಾದ ಮಕದುಮ್ ಮೊರಬ, ತೌಸಿಫ್ ಹಾಲಬಾವಿ, ಸಾಹಿಲ್ ಶೈಖ್, ಸಾಹಿಲ್ ಚಡ್ಡಾ, ಮಹಮ್ಮದ್ ಮಿರ್ಜಿ ಹಾಗೂ ಬಲವಂತ ಸಿಂಘ್ ಡಬೋಲಾ ಎಂದು ತಿಳಿದುಬಂದಿದೆ. ಇವರು ಕುಸುಗಲ್ ರಸ್ತೆ ರೈಲ್ವೆ ಸೇತುವೆ ಮೇಲೆ ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದರು. ಇನ್ನೂ ಖಚಿತ ಮಾಹಿತಿ ಮೇರೆಗೆ ಸೈಬರ್ ಕ್ರೈಂ ಪೊಲೀಸರು ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಪ್ರಾಪ್ತ ಸೇರಿ ಆರು ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಈ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.