ಹಳೇ ವೈಷಮ್ಯದ ಹಿನ್ನಲೆಯಲ್ಲಿ ರೌಡಿ ಶೀಟರ್ ಓರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದಲ್ಲಿ ನಡೆದಿದೆ.
ಸೋಮು ತಾಳಿಕೋಟೆ @ ಸೋಮ್ಯಾ ಕೊಲೆಯಾದ ವ್ಯಕ್ತಿ. ಹರಿತವಾದ ಆಯುಧಗಳಿಂದ ಕೊಚ್ಚಿ ಕೈಕೆಗೈದು ಆಳಂದ ರಸ್ತೆಯ ರೈಲು ಹಳಿ ಬಳಿ ದುಷ್ಕರ್ಮಿಗಳು ಶವವನ್ನು ಎಸದಿದ್ದಾರೆ.
ಕೆಲ ತಿಂಗಳ ಹಿಂದೆ ಪಟ್ಟಣ ಗ್ರಾಮದ ಢಾಬಾ ಮಾಲೀಕನೊಂದಿಗೆ ಸೋಮು ಜಗಳವಾಡಿದ್ದನಂತೆ. ಢಾಬಾ ಮಾಲೀಕನ ಮೇಲೆ ಸೋಮು ಮತ್ತು ಆತನ ಗ್ಯಾಂಗ್ ನಿಂದ ಹಲ್ಲೆ ಮಾಡಲಾಗಿತ್ತು, ಇದೆ ಕಾರಣಕ್ಕೆ ಹಳೆ ವೈಷಮ್ಯದಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಕಲಬುರಗಿ ಉಪನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.