ಹುಬ್ಬಳ್ಳಿ: ಜಾಬಿನ್ಸ್ ಕಾಲೇಜ್ ಪ್ರಾಧ್ಯಾಪಕರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ವಿದ್ಯಾನಗರದ ಜೆ.ಜಿ.ಕಾಮರ್ಸ್ ಕಾಲೇಜಿನ ಹಿಂಭಾಗದ ಕ್ವಾಟ್ರಸ್ ಮನೆಯಲ್ಲಿ ನಡೆದಿದೆ.
ಪ್ರವೀಣ್ ಕುಮಾರ್ ಯು.ಆರ್ (35) ಎಂಬಾತರೇ ನೇಣಿಗೆ ಶರಣಾಗಿದ್ದಾರೆ. ನವೆಂಬರ್ 13 ರ ರಾತ್ರಿ ಬೆಳಗಿನ ಜಾವ 3 ಗಂಟೆಯ ವೇಳೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ. ನೇಣಿಗೆ ಶರಣಾಗಿರುವ ಪ್ರಾಧ್ಯಾಪಕರ ಸಾವಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.
ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.