ಹುಬ್ಬಳ್ಳಿ: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಪುಂಡರಿಬ್ಬರು ಚುಡಾಯಿಸಿದಲ್ಲದೇ ಅಪ್ರಾಪ್ತೆಯ ಹಿಂದೆ ಬಿದ್ದು ಕಾಟ ಕೊಟ್ಟಿರುವ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಶರಾವತಿ ನಗರದಲ್ಲಿಯೇ ಈ ವೊಂದು ಘಟನೆ ನಡೆದಿದ್ದು, ಶಾಲಾ ಬಾಲಕಿಯೊರ್ವರು ಶಾಲೆಯಿಂದ ಮನೆಗೆ ಬರುವ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದಿದ್ದ ಇಬ್ಬರು ಪುಂಡರು ಬಾಲಕಿಯನ್ನು ಹಿಂದಿನಿಂದ ಫಾಲೋ ಮಾಡಿಕೊಂಡು ಬರುತ್ತಾ ಚುಡಾಯಿಸಿದ್ದಾರೆ.
ಅಷ್ಟಕ್ಕೇ ಸುಮ್ಮನೆ ಆಗದ ಪುಂಡರು ಬಾಲಕಿ ಭಯಗೊಂಡು ಓಡಲು ಶುರು ಮಾಡುತ್ತಾಳೆ. ಆದರೂ ಸಹ ಅವಳನ್ನು ಅಡ್ಡಗಟ್ಟಲು ಯತ್ನಿಸಿದ್ದಾರೆ.ಈ ವೇಳೆ ಅಲ್ಲಿಯೇ ಇದ್ದ ಸ್ಥಳೀಯರು ಯುವಕರಿಗೆ ಪ್ರಶ್ನೆ ಮಾಡುತ್ತಿದ್ದಂತೆಯೇ ಸ್ಥಳದಿಂದ ಬೈಕ್ ಸಮೇತವಾಗಿ ಪರಾರಿಯಾಗಿದ್ದಾರೆ.
ಸದ್ಯ ಬಾಲಕಿಗೆ ತೊಂದರೆ ನೀಡಿದ ಪುಂಡರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡು, ಮಹಿಳೆಯರಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕಿದೆ.