ಹುಬ್ಬಳ್ಳಿ: ಕೊಟ್ಟ ಹಣವನ್ನು ವಾಪಾಸ್ ಕೇಳಿದಕ್ಕೆ ಸ್ನೇಹಿತರೇ ಚಾಕುವಿನಿಂದ ಮನಬಂದಂತೆ ಚುಚ್ಚಿರುವ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೊಹಮ್ಮದ್ ಮೊರಬ ಎಂಬಾತನಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಈ ಘಟನೆ ಆನಂದನಗರದಲ್ಲಿ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ಮೊಹಮ್ಮದ್ ತನ್ನ ಸ್ನೇಹಿತನಿಗೆ ಕಷ್ಟ ಎಂದಾಗ ಹಣ ಕೊಟ್ಟು ಸಹಾಯ ಮಾಡಿದ್ದ, ಇದೀಗ ಮೊಹಮ್ಮದ್ ಕೊಟ್ಟ ಹಣವನ್ನು ವಾಪಾಸ್ ಕೇಳಿದಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.
ಇನ್ನು ಅಲ್ತಾಫ್, ಜಾಫರ್, ರಫಿಕ್ ಹಾಗೂ ರಿಜ್ಜು ಚಾಕು ಇರಿದವರಾಗಿದ್ದಾರೆ.ಸದ್ಯ ಗಂಭೀರವಾಗಿ ಗಾಯಗೊಂಡಿರುವ ಮೊಹಮ್ಮದ್ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಳೇಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಒಟ್ಟಿನಲ್ಲಿ ದಿನೇ ದಿನೇ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚುತ್ತಲೇ ಇದ್ದು ಈವರೆಗೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆ ಬಗ್ಗೆ ಇದ್ದ ಭಯದ ವಾತಾವರಣ ಮತ್ತೆ ಮಾಯವಾಯಿತಾ ಅನ್ನೋ ಅನುಮಾನ ಮೂಡಿತ್ತಿದೆ. ಹೀಗಾಗಿ ಖಾಕಿ ಭಯವೇ ಇಲ್ದೇ ಮತ್ತೆ ಬಾಲ ಬಿಚ್ಚುತ್ತಿರೋ ಪುಡಿರೌಡಿಗಳಿಗೆ ಪೊಲೀಸರು ಮತ್ತಷ್ಟು ಕಡಿವಾಣ ಹಾಕಬೇಕಿದೆ.