ಹುಬ್ಬಳ್ಳಿ ಎಂದರೆ ವಾಣಿಜ್ಯ ನಗರಿ ಎಂದೇ ಹೆಸರುವಾಸಿ. ಈ ವಾಣಿಜ್ಯ ನಗರಿಯಲ್ಲಿ ಕೇವಲ ವಾಣಿಜ್ಯೋದ್ಯಮ ವ್ಯಾಪಾರ, ವಹಿವಾಟು ಅಷ್ಟೇ ನಡೆಯುತ್ತವೆ ಅಂದುಕೊಂಡಿದ್ದರೆ ಆ ನಿಮ್ಮ ಊಹೆ ತಪ್ಪು..ಹುಬ್ಬಳ್ಳಿ ನಗರದ ಹೊರವಲಯದಲ್ಲಿ ಅದೆಷ್ಟೋ ಕಳ್ಳಾಟಗಳು ನಡೆಯುತ್ತವೆ ಅನ್ನೋದು ಇನ್ನೂ ಅದೆಷ್ಟೋ ಜನತೆಗೆ ಗೊತ್ತಿಲ್ಲ ಅನ್ನಿಸುತ್ತೆ.
ಹೌದು..ಹುಬ್ಬಳ್ಳಿಯ ಹೊರವಲಯದ ಗದಗ ಬೈಪಾಸ್, ಕುಸುಗಲ್ ರಸ್ತೆ, ಸುಳ್ಳ ರಸ್ತೆಗೆ ಬಂದ್ರೆ ಸಾಕು ಅಲ್ಲಿ ಏನೆಲ್ಲ ಕಳ್ಳಾಟ ನಡೆಯುತ್ತೆ ಅನ್ನೋದು ಅಲ್ಲಿ ನಡೆಯೋ ಚಟುವಟಿಕೆಗಳಿಗೆ ಸಾಥ್ ನೀಡೋ ಮಹಾನುಭಾವರಿಗೇ ಗೊತ್ತು.
ಎಸ್….ಡೈರೆಕ್ಟಾಗೇ ವಿಷಯಕ್ಕೆ ಬರೋದಾದ್ರೆ ಮರಳು ದಂಧೆ ಅನ್ನೋದು ನಾವೆಲ್ಲ ನದಿಯಾಚೆಗಿನ ಜಿಲ್ಲೆಗಳಲ್ಲಿ ಮಾತ್ರ ಕೇಳಿರುತ್ತೇವೆ. ಆದ್ರೆ ಆ ಮರಳು ಸಾಗಾಟವಾಗೋ ಜಿಲ್ಲೆಗಳಲ್ಲಿ ರಾತ್ರೋ ರಾತ್ರಿ ಏನೆಲ್ಲ ನಡೆಯುತ್ತೆ ಅನ್ನೋದು ಮಾತ್ರ ನಿಗೂಢ… ಆ ನಿಗೂಢತೆಗೆ ಸಾಕ್ಷಿ ಎಂಬಂತೆ ಮರಳು ದಂಧೆಗೆ ಬ್ರೇಕ್ ಹಾಕಬೇಕಾದ ಪೊಲೀಸ್ ಇಲಾಖೆಯೇ ಒಳಗಿಂದೊಳಗೇ ಸಾಥ್ ನೀಡೋದು, ಮರಳು ಹೊತ್ತು ಬರೋ ಟಿಪ್ಪರ್ ಗಳಿಗೆ ಪ್ರತಿ ತಿಂಗಳು ಮಾಮೂಲಿ ಪಡೆಯೋ ಪೊಲೀಸರಿಗೇ ಗೊತ್ತು….ಗದಗ ,ಮುಂಡರಗಿ, ಲಕ್ಷ್ಮೇಶ್ವರ, ಬಿಜಾಪುರ ರಸ್ತೆ, ಸೆರಿದಂತೆ ಬೇರೆ ಬೇರೆ ಭಾಗಗಳಿಂದ ಮರಳು ತುಂಬಿಕೊಂಡು ವಾಣಿಜ್ಯ ನಗರಿಗೆ ಸಾಗಾಟ ಮಾಡೋ ಮರಳು ತುಂಬಿದ ಲಾರಿಗೆ ಪೊಲೀಸ್ ಠಾಣೆಯಿಂದ ಇಂತಿಷ್ಟು ಅಂತಾ ಫಿಕ್ಸ್ ಮಾಡೋದು ಈ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ.

ಆದ್ರೆ ಅದೇ ಪೊಲೀಸ್ ಠಾಣೆ ಸರಹದ್ದಿನ ಒಳಗೆ ಬರುವ ಲಾರಿಗಳಿಗೆ ಇಂತಿಷ್ಟು ಅಂತಾ ಫಿಕ್ಸ್ ಮಾಡೋಕೆ ಸಪ್ರೇಟ್ ದ್ವಾರಪಾಲಕರು ಬೈಪಾಸ್ ನ ಹೈವೇ ರಸ್ತೇಲಿ ಬೀಡು ಬಿಡೋ ಸಂಪ್ರದಾಯ ಇದೀಗ ಸದ್ದಿಲ್ಲದೇ ನಡೆಯುತ್ತಿದೆ. ಆ ರೀತಿ ಸಂಪ್ರದಾಯ ಶುರುವಾಗಿರೋದು ಯಾವಾಗಿಂದ.. ಆ ಸಂಪ್ರದಾಯಕ್ಕೆ ನಾಂದಿ ಹಾಡಿರೋ ಆ ಮಹಾನುಭಾವರು ಯಾರು….? ಗದಗ ಬೈಪಾಸ್ ನಲ್ಲಿ ಮರಳು ಮರುಳಾಗಿ ನಡೆಯುತ್ತಿರೋದಾದ್ರೂ ಏನು ಅನ್ನೋದನ್ನ ಮುಂದಿನ ಸಂಚಿಕೆಯಲ್ಲಿ ನಿಮ್ಮ ಕರ್ನಾಟಕ ಪಬ್ಲಿಕ್ ವಾಯ್ಸ್ ನ್ಯೂಸ್ ಬಿತ್ತರಿಸಲಿದೆ!!!