ಹುಬ್ಬಳ್ಳಿ: ಅಪ್ರಾಪ್ತ ಬಾಲಕರಿಬ್ಬರು ಕಾರ್ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿರುವ ಘಟನೆ ಇಲ್ಲಿನ ಬೈರಿದೇವರಕೊಪ್ಪ ಶಾಂತಿನಿಕೇತನ ಕಾಲೋನಿ ಬಳಿಯಲ್ಲಿ ಈಗಷ್ಟೇ ನಡೆದಿದ್ದು.
ಶಾಲೆಗೆ ಹೋಗುವ ಬಾಲಕರು ಮನೆಯಿಂದ ಕಾರ್ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದ್ದಾರೆ, ಡಿಕ್ಕಿ ಹೊಡೆದ ರಭಸಕ್ಕೆ ಕಾರ್ ನಲ್ಲಿದ್ದ ಏರ್ ಬ್ಯಾಗ್ ತೆರೆದಿದೆ, ಈ ಹಿನ್ನೆಲೆ ಬಾಲಕರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ.
ಕೆಪಿಟಿಸಿಎಲ್ ನೌಕರ ಮಕ್ತುಮಸಾಬ್ ನಧಾಪ ಎಂಬವರಿಗೆ ಸೇರಿದ ಕಾರು ಇದಾಗಿದೆ. ಪಾಲಕರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ನವನಗರ ಹಾಗೂ ಉತ್ತರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಕ್ಕಳ ಕೈಯಲ್ಲಿ ವಾಹನ ಕೊಡಬೇಡಿ ಎಂದು ಸರ್ಕಾರ ಎಷ್ಟೋ ಜಾಗೃತಿ ಮೂಡಿಸಿದರೂ ಕೂಡಾ ಪಾಲಕರು ನಿರ್ಲಕ್ಷ್ಯದಿಂದಾಗಿ ಇಂತಹ ಸಾಕಷ್ಟು ಅವಘಡಗಳು ಸೃಷ್ಟಿಯಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳ ಕೈಯಲ್ಲಿ ವಾಹನ ಕೊಡುವ ಮುನ್ನ ಯೋಚಿಸಬೇಕಿದ್ದು, ಇಂತಹ ಅವಘಡಗಳಿಗೆ ಪಾಲಕರೇ ನೇರ ಹೊಣೆಯಾಗಬಹುದಾಗಿದೆ.