ಹುಬ್ಬಳ್ಳಿ:ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಇಂದು ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಶಂಕರ ಚವ್ಹಾಣ್ (30) ಮೃತ ಮಾಲಾಧಾರಿಯಾಗಿದ್ದು ಹುಬ್ಬಳ್ಳಿಯ ಉಣಕಲ್ ನಿವಾಸಿಯಾಗಿದ್ದಾನೆ. ಬಾಲ್ಯದಲ್ಲೇ ತಂದೆ-ತಾಯಿಯನ್ನ ಕಳೆದುಕೊಂಡು ದೊಡ್ಡಮ್ಮನ ಮನೆಯಲ್ಲಿ ಬೆಳೆದಿದ್ದ. ಅಯ್ಯಪ್ಪನ ವೃತ ಮಾಡಲು ಮೊದಲ ಬಾರಿಗೆ ಮಾಲೆ ಹಾಕಿದ್ದ. ಚಿಕಿತ್ಸೆಗೆ ಸ್ಪಂದಿಸದೆ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾನೆ.
ಕಳೆದ ಏಳು ದಿನಗಳಿಂದ ಕೆ ಎಂ ಸಿ ಆರ್ ಐ ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದ್ರು ಚಿಕಿತ್ಸೆ ಫಲಿಸೆ ಮೃತಪಟ್ಟಿದ್ದು, 9 ಜನರಲ್ಲಿ ಸದ್ಯಕ್ಕೆ ಐವರು ಮೃತಪಟ್ಟಿದ್ದು, ಇನ್ನುಳಿದ 4 ಜನರಿಗೆ ಚಿಕಿತ್ಸೆ ಮುಂದುವರೆದಿದ್ದು ,ಅದರಲ್ಲಿ ಮೂವರು ಸ್ಥಿತಿ ಇನ್ನೂ ಗಂಭೀರವಾಗಿದ್ದು ಓರ್ವರಲ್ಲಿ ಚೇತರಿಕೆ ಕಂಡು ಬಂದಿದೆ.