ಹುಬ್ಬಳ್ಳಿ: ಇಷ್ಟು ದಿನಗಳ ಕಾಲ ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಅಪರಾಧ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಂತೆ ಇಂದು ಕೂಡಾ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರಿಗೆ ಚಾಕು ಇರಿದಿರುವ ಘಟನೆ ಹುಬ್ಬಳ್ಳಿಯ ಆನಂದನಗರದ ಘೋಡಕೆ ಪ್ಲಾಟ್ ನಲ್ಲಿ ನಡೆದಿದೆ.
ಸಮೀರ್ ಶೇಖ್ (18) ಹಾಗೂ ಆತನ ಚಿಕ್ಕಪ್ಪ ಜಾವೇದ್ ಶೇಖ್ (32) ಎಂಬವರೇ ಚಾಕು ಇರಿತಕ್ಕೆ ಒಳಗಾದವರು, ರವಿವಾರ ಕ್ಷುಲ್ಲಕ ಕಾರಣಕ್ಕೆ ತಮ್ಮ ಮಗ ಹಾಗೂ ಆತನ ಸ್ನೇಹಿತನ ನಡುವೆ ತಂಟೆ ನಡೆದಿದೆ. ಇದೇ ವಿಚಾರಕ್ಕೆ ಇಂದು ರವಿವಾರ ಗಾಯಗೊಂಡ ಯುವಕನ ಕಡೆಯವರು ಇಂದು ತಂಟೆ ತೆಗೆದು ಚಿಕ್ಕಪ್ಪ ಹಾಗೂ ಮಗನಿಗೆ ಚಾಕು ಇರಿದಿದ್ದಾರೆ.

ಸದ್ಯ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಚಾಕು ಇರಿದ ವಿಷಯ ತಿಳಿಯುತ್ತಿದ್ದಂತೆ ಕಿಮ್ಸ್ ಆಸ್ಪತ್ರೆಗೆ ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ, ಸಮೀರ್ ಶೇಖ್ ಹಾಗೂ ಜಾವೇದ್ ಶೇಖ್ ಗಾಯಗೊಂಡಿದ್ದಾರೆ. ಸಣ್ಣ ಮಕ್ಕಳ ಜಗಳದಲ್ಲಿ ದೊಡ್ಡವರು ಭಾಗಿಯಾಗಿ ಏಕಾಏಕಿ ಈ ರೀತಿ ಘಟನೆಯಾಗಿದೆ. ಯಾರು ಈ ಕೃತ್ಯ ಎಸಗಿದ್ದಾರೆಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದನಗರದ ಘೋಡಕೆ ಪ್ಲಾಟ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಏನು ಸಿಗುತ್ತೋ ನೋಡಿಕೊಂಡು ಇದೊಂದು ಕೊಲೆ ಪ್ರಯತ್ನ ಪ್ರಕರಣವಾಗಿದ್ದು, ದೂರು ದಾಖಲಾಗಿಲ್ಲ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಆದಷ್ಟು ಬೇಗಾ ಬಂಧನ ಮಾಡಲಾಗುವುದು ಎಂದು ಅವರು ತಿಳಿಸಿದರು.