ಧಾರವಾಡ: ನಗರದ ಹೊಸ ಬಸ್ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ನಡೆದ ಪಾದಚಾರಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಆ ಘಟನೆಯು ಹೊಸ ತಿರುವು ಪಡೆದಿದೆ .
ಹೌದು.. ಬಸ್ ನಿಲ್ದಾಣದ ಒಳಗೆ ಅಪರಿಚಿತ ವ್ಯಕ್ತಿಯೋರ್ವ ಸಾವನ್ನಪ್ಪಿದ್ದ, ಅದು ಅಪಘಾತವೆಂದು ಹೇಳಲಾಗಿತ್ತು, ಆದರೆ ಅದು ಅಪಘಾತವಲ್ಲ, ಅದು ಆತ್ಮಹತ್ಯೆ ಎಂದು ತಿಳಿದುಬಂದಿದೆ. ಮೃತ ವ್ಯಕ್ತಿಯು ಬಸ್ಸಿನ ಹಿಂದಿನ ಚಕ್ರಕ್ಕೆ ತಾನೇ ತಲೆ ಕೊಟ್ಟು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಮೃತ ವ್ಯಕ್ತಿ ಯಾರು? ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಮಾತ್ರ ಇನ್ನು ಲಭ್ಯವಾಗಿಲ್ಲ.
https://www.instagram.com/reel/DFDnpaSSsmr/?igsh=b3Z6dm9hZ3hnMmNp
ಸದ್ಯ ಈ ಪ್ರಕರಣ ಧಾರವಾಡ ಸಂಚಾರಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು, ಮೃತ ವ್ಯಕ್ತಿಯ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.