ಹುಬ್ಬಳ್ಳಿ: *ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ’* ಎಂಬ ಮಾತಿನಂತೆ ಅಂದು ಗುರುಗಳು ಕಲಿಸಿದ ಪಾಠದಿಂದಾಗಿ ಇಂದು ಎಲ್ಲರೂ ಒಂದೊಂದು ಜವಾಬ್ದಾರಿಯುತ ಸ್ಥಾನದಲ್ಲಿ ನಿಂತಿದ್ದೇವೆ. *ಗುರುಗಳ ಋಣ ತೀರಿಸಲು ಅಸಾಧ್ಯ* ಎಂದು *ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ ಎಸ್.ಆರ್.ನಾಯಕ* ಹೇಳಿದರು.
ನಗರದ ಘಂಟಿಕೇರಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 1995-96 ನೇ ಸಾಲಿನ ಏಳನೇ ತರಗತಿ ವಿದ್ಯಾರ್ಥಿಗಳಿಂದ *ಗುರುವಂದನಾ ಕಾರ್ಯಕ್ರಮ ಹಾಗೂ 30 ವರ್ಷದ ಸ್ನೇಹ ಪುನರ್ ಮಿಲನ ಸಮಾರಂಭವನ್ನು* ಉದ್ದೇಶಿಸಿ ಅವರು ಮಾತನಾಡಿದರು. ಅಂದು ಗುರುಗಳಿಗೆ ನೀಡುವಂತಹ ಗೌರವ ಇದೀಗ ಸಿಗುತ್ತಿಲ್ಲ. ಈ ಕುರಿತು ಯುವ ಪೀಳಿಗೆ ಅರಿತು ಬಾಳಬೇಕಿದೆ ಎಂದು ಸಲಹೆ ನೀಡಿದರು.

ಬರೋಬ್ಬರಿ ಮೂವತ್ತು ವರ್ಷಗಳ ಈ ಸ್ನೇಹ ಸಮ್ಮಿಲನ ಕೂಡಿದ್ದು ತುಂಬಾ ಸಂತಸಕರ ಸಂಗತಿ, ಇಂತಹ ಕಾರ್ಯಕ್ರಮವನ್ನು ಮಾಡುವುದರಿಂದ *ಗೆಳೆಯರ ಮಿಲನ* ಆಗುತ್ತದೆ ಇದರಿಂದ ಒತ್ತಡದ ಜೀವನಕ್ಕೆ ಒಂಚೂರು ನಿರಾಳ ಸಿಕ್ಕಂತಹ ಭಾಸವಾಗುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.