ಹುಬ್ಬಳ್ಳಿ: ಅವಳಿನಗರದಲ್ಲಿ ವಿಕೃತ ಕಾಮುಕರ ಸಂಖ್ಯೆ ಹೆಚ್ಚಾಗಿದ್ದು, ವಿಕೃತ ಕಾಮಿಯೊಬ್ಬ ಚಿಕ್ಕಮಕ್ಕಳನ್ನು ಅಪಹರಿಸಿ ಅವರ ಜೊತೆ ವಿಕೃತಿ ಮೆರೆದು ಸಾರ್ವಜನಿಕರಿಂದ ಧರ್ಮದೇಟು ತಿಂದ ಘಟನೆ ನಡೆದಿದೆ.

ನಗರದ ತೋರವಿಹಕ್ಕಲ್ ನಲ್ಲಿ ಈ ಒಂದು ಘಟನೆ ನಡೆದಿದ್ದು, ಮಕ್ಕಳಿಗೆ ಚಾಕಲೇಟ್ ತೋರಿಸಿ ಪುಸಲಾಯಿಸಿ ತನ್ನ ಕಾಮಚೇಷ್ಟೆ ಮೆರೆದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕಾಮುಕನಿಗೆ ಧರ್ಮದೇಟು ನೀಡಿ, ಮೆರವಣಿಗೆ ಮೂಲಕ ಪೋಲಿಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ.

ಓಣಿಯಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಕರೆದೊಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಕೃತಿ ಮೆರೆದ ಕಾಮುಕ ಬಮ್ಮಾಪುರ ಓಣಿ ನಿವಾಸಿ ಆದಿಲ್ ಅಂಕಲಗಿ ಎಂದು ತಿಳಿದುಬಂದಿದೆ.
ಸದ್ಯ ಕಾಮಿಯನ್ನೂ ವಶಕ್ಕೆ ಪಡೆದ ಕಾಮರಿಪೇಟೆ ಠಾಣೆಯ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.