ಹುಬ್ಬಳ್ಳಿ: ಮೂರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 5,87,000 ರೂ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಮೂರು ಜನ ಆರೋಪಿ ಹಾಗೂ ಅಪ್ರಾಪ್ತನನ್ನು ಬಂಧಿಸುವಲ್ಲಿ ಎಪಿಎಂಸಿ ನವನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ .
ಕಳೆದ ಆಗಷ್ಟ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಹುಬ್ಬಳ್ಳಿ ಎಪಿಎಂಸಿ ಈಶ್ವರನಗರ ಸಮೃದ್ಧಿ ಬಡಾವಣೆ, ಎಸ್.ಆರ್.ನಗರ ಅಂಕೋಲೆಕರ್ ಲೇಔಟ್ ಹಾಗೂ ಎಂಐಜಿ ಕಾಲೋನಿಯಲ್ಲಿ ಕಳ್ಳರು ಕಳ್ಳತನ ಮಾಡಿ ಕೈಚಳಕ ತೋರಿದ್ದಾರೆ.

ಈ ಕಳ್ಳತನ ಪ್ರಕರಣಗಳನ್ನು ದಾಖಲಿಸಿ ವಿಶೇಷ ತಂಡ ರಚಿಸಿದ ಇನ್ಸ್ಪೆಕ್ಟರ್ ಸಮಿವುಲ್ಲಾ, ಪಿಎಸ್ಐ ದೇವೇಂದ್ರ ಮಾವಿನಂಡಿ ನೇತೃತ್ವದ ತಂಡ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿ ಸಿದ್ದಪ್ಪ ಅಂಬಿಗೇರ್, ವಿಷ್ಣು ಅಂಬಿಗೇರ, ಕುನಾಲಸಿಂಗ್ ಟಾಕ್ ಹಾಗೂ ಓರ್ವ ಅಪ್ರಾಪ್ತ ಆರೋಪಿಯನ್ನು ಬಂಧಿಸಿ ಅವರಿಂದ 4,50,000/-ರೂ ಮೌಲ್ಯದ 60 ಗ್ರಾಂ ತೂಕದ ಬಂಗಾರದ ಸರ, 37,000/-ರೂ ಮೌಲ್ಯದ 360 ಗ್ರಾಂ ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ 1,00,000/-ರೂ ಮೌಲ್ಯದ ಟಿವಿಎಸ್ ಎಂಟಾರ್ಕ ದ್ವೀಚಕ್ರವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣವನ್ನು ಬೇಧಿಸಿದ ನವನಗರ ಎಪಿಎಂಸಿ ಠಾಣೆಯ ಇನ್ಸ್ಪೆಕ್ಟರ್ ಸಮಿವುಲ್ಲಾ ಕೆ, ಪಿಎಸ್ಐಗಳಾದ ದೇವೆಂದ್ರ ಮಾವಿನಂಡಿ, ಎಂ ಬಿ ಈಟಿ, ಸಿಬ್ಬಂದಿಗಳಾದ ರವಿ.ಆರ್ ಹೊಸಮನಿ, ಪಿ ಎಸ್ ಛಲವಾದಿ, ಎಂ ಎಂ ತಳಗೇರಿ, ಐ ಬಿ ಮಡಿವಾಳರ, ಕಲ್ಲಪ್ಪ ಬೀರನೂರ, ಸಿ.ವೈ ಬಕ್ಕಸದ, ಬಿ.ಎಸ್ ಮನ್ನೂರ, ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ಎಂ.ಎಸ್ ಚಿಕ್ಕಮಠ, ಆರ್.ಕೆ ಭಡಂಕರ ಹಾಗೂ ರವಿ ಗೋಮಪ್ಪನವರ ಇವರ ಕಾರ್ಯವೈಖರಿಯನ್ನು ಪೋಲಿಸ್ ಆಯುಕ್ತರಾದ ಎನ್ ಶಶಿಕುಮಾರ, ಡಿಸಿಪಿಗಳಾದ ಮಹಾನಿಂಗಪ್ಪ ನಂದಗಾವಿ, ಆರ್ ರವೀಶ್, ಎಸಿಪಿ ಶಿವಪ್ರಕಾಶ್ ನಾಯ್ಕ್ ಅವರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.