ಹುಬ್ಬಳ್ಳಿ: ಮನೆಯ ಮುಂದೆ ನಿಲ್ಲಿಸಿದ ಹೊಂಡಾ ಕಂಪನಿಯ ಡಿಯೋ ಸ್ಕೂಟರ ದ್ವಿಚಕ್ರವಾಹನವನ್ನು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದು ಓರ್ವ ಆರೋಪಿಯನ್ನು ಬಂಧನ ಮಾಡುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಟೂರ ರೋಡ ಹರಿಶ್ಚಂದ್ರ ಕಾಲನಿ ನಿವಾಸಿ ನೂರಆಹ್ಮದ ಮಿರ್ಜಿ (30) ಬಂಧಿತ ಆರೋಪಿ. ಈತನು ನಗರದ ದುರ್ಗದಬೈಲ ಕಲಾದಗಿ ಓಣಿಯ ನಿವಾಸಿ ಅಜಯ ಬಾಯ್ಕೆರಿಕರ ಅವರು ಮನೆ ಮುಂದೆ ನಿಲ್ಲಿಸಿದ ಡಿಯೊ ಬೈಕ್ ನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಶಹರ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿಯ ಜೆ.ಸಿ.ನಗರ ವೊಮೆನ್ಸ್ ಕಾಲೇಜ ರಸ್ತೆಯಲ್ಲಿ ಬೈಕ್ ಸಮೇತ ಹೋಗುತಿದ್ದ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡು ಜೈಲಿಗೆ ಅಟ್ಟಿದ್ದಾರೆ.

ಈ ಪ್ರಕರಣವನ್ನು ದಕ್ಷಿಣ ವಿಭಾಗದ ಎಸಿಪಿ ಉಮೇಶ್ ಚಿಕ್ಕಮಠ ಅವರ ಮಾರ್ಗದರ್ಶನದಲ್ಲಿ ಶಹರ ಠಾಣೆಯ ಪೊಲೀಸ ಇನ್ಸಪೆಕ್ಟರ ಮೊಹಮದ್ ರಫೀಕ್ ತಹಶೀಲ್ದಾರ್ ನೇತೃತ್ವದಲ್ಲಿ ಪಿ.ಎಸ್.ಐಗಳಾದ ವಿನೋದ ದೊಡ್ಡಲಿಂಗಪ್ಪನವರ, ಮಾರುತಿ. ಆರ್. ಮತ್ತು ಅಪರಾಧ ಸಿಬ್ಬಂಧಿ ಜನರಾದ, ಎ.ಎಸ್.ಐ ದಾಸಣ್ಣವರ, ವಿಶ್ವಲ ಭೋವಿ, ಶಂಕರಗೌಡಾ ಹೊಸಮನಿ, ಕನಕಪ್ಪ ರಗಣಿ, ರಾಮರಾವ್ ರಾಠೋಡ, ರವಿ ಕೆಂದೂರ, ರುದ್ರಪ್ಪ ಹೊರಟ್ಟಿ, ಸುಧಾಕರ ನೇಸೂರ ಈಶ್ವರಪ್ಪ ಕುರುವಿನಶೆಟ್ಟಿ, ವಾಯ್.ಎಮ್.ಶೇಂಡೈ ಇವರ ಕಾರ್ಯ ವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಎನ್. ಶಶಿಕುಮಾರ ರವರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.