ಹುಬ್ಬಳ್ಳಿ: ಅಂಗನವಾಡಿ ಮಕ್ಕಳಿಗೆ ನೀಡಬೇಕಾದ ಆಹಾರ ಪಾಕೇಟ್ ಗಳನ್ನು ನೀಡದೇ ಅಕ್ರಮವಾಗಿ ಗೋಡೌನ್ ನಲ್ಲಿ ದಾಸ್ತಾನು ಮಾಡಿದ್ದು, ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿಯಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಜನವರಿ ತಿಂಗಳಲ್ಲಿ ಮಕ್ಕಳಿಗೆ ನೀಡಬೇಕಾದ ಸುಮಾರು 270 ಪಾಕೆಟ್ ಪೌಷ್ಟಿಕ ಆಹಾರವಾದ ಅಕ್ಕಿ, ಹಾಲಿನ ಪುಡಿಯು ನಗರದ ಹೊರವಲಯದ ಗಬ್ಬೂರು ಬಳಿಯ ಹಳೇ ಗೋಡೌನ್ ನಲ್ಲಿ ಪತ್ತೆಯಾಗಿದೆ.
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋಡೌನ್ ಮೇಲೆ ದಾಳಿ ಮಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ತಹಶಿಲ್ದಾರರು ಸಂಬಂಧಿಸಿದ ಅಧಿಕಾರಿಗಳು ಹಾಲಿನ ಪುಡಿ, ಗೋಧಿ, ಅಕ್ಕಿ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ಗೋಡೌನ್ ಮಾಲೀಕರ ಹೆಸರು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾಗಿದ್ದು, ಫಾರೂಕ್ ಎಂಬಾತನಿಗೆ ಸೇರಿದ ಗೋಡೌನ್ ಇದಾಗಿದೆ ಎಂಬುದು ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಇನ್ನೂ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹ ಮಾಡಲಾಗಿತ್ತು ಎಂಬುದು ತಿಳಿದು ಬಂದಿದೆ.