ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಗ್ಯಾಂಗ್ ವಾರ್ ಶುರುವಾಗಿದೆ. ಹಳೇ ವೈಷಮ್ಯದ ಹಿನ್ನೆಲೆ ವ್ಯಕ್ತಿಯೊಬ್ಬನಿಗೆ ಪುಂಡರ ಗ್ಯಾಂಗ್ ವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಎಸ್ ಎಂ ಕೃಷ್ಣಾ ನಗರದ ನಿವಾಸಿ ಜಮೀರ ಅತ್ತರ್ ಎಂಬುವವನ ಮೇಲೆ ಜಿದ್ಧಿ ಮಲ್ಲಿಕ್ ಆ್ಯಂಡ್ ಗ್ಯಾಂಗ್ ಅಟ್ಯಾಕ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಇಬ್ಬರು ಗುಂಪಿನ ನಡುವೆ ಕ್ಷುಲ್ಲಕ ಕಾರಣದಿಂದಾಗಿ ಜಗಳ ನಡೆಯುತ್ತಿತ್ತಂತೆ. ಇಂದು ಅದೇ ಹಳೇ ವೈಷಮ್ಯದ ಕಾರಣ ಜಿದ್ಧಿ ಮಲ್ಲಿಕ್ ಆ್ಯಂಡ್ ಗ್ಯಾಂಗ ಏಕಾಏಕಿ ಜಮೀರ್ ಅತ್ತರ್ ಮೇಲೆ ಅಟ್ಯಾಕ್ ಮಾಡಿ ಮನಬಂದಂತೆ ಹಲ್ಲೆ ಮಾಡಿದ್ದಾರೆ.

ಗ್ಯಾಂಗ್ ನಡೆಸಿದ ಹಲ್ಲೆಯಿಂದಾಗಿ ಜಮೀರ್ ತಲೆ ಹಾಗೂ ಕಾಲು ಸೇರಿದಂತೆ ಹಲವು ಕಡೆ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಜಮೀರ್ ನನ್ನ ದಾಖಲಿಸಲಾಗಿದೆ.
ಒಟ್ಟಿನಲ್ಲಿ ಹಳೇ ವೈಷಮ್ಯದಿಂದ ಇದೇ ರೀತಿ ಘಟನೆಗಳು, ಹೊಡೆದಾಟದ ಪ್ರಕರಣಗಳು ಪದೇ ಪದೇ ನಡೆಯುತ್ತಿರೋದು ನಗರದ ಸಾರ್ವಜನಿಕರನ್ನ ಭಯಭೀತರನ್ನಾಗಿಸಿದೆ. ಪೊಲೀಸ ಇಲಾಖೆಯು ತಪ್ಪದೆ ಏರಿಯಾ ಡಾಮಿನೇಷನ್, ಅಪರಾಧ ಬಗ್ಗೆ ಜಾಗೃತಿ ಹೀಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ, ಆದ್ರೆ ಇದು ಸರಿಯಾಗಿ ಜನರಿಗೆ ತಲುಪುತ್ತಿದೆಯಾ??? ಒಂದು ವೇಳೆ ತಲುಪುತಿದ್ದರೆ ಇಂತಹ ಘಟನೆಗಳು ಆಗುತ್ತಿರುವುದು ಏಕೆ?? ಹೀಗೆ ಹತ್ತು ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು,
ಹುಬ್ಬಳ್ಳಿ ಧಾರವಾಡ ಪೋಲಿಸ್ ಇಲಾಖೆಯು ಸಂಶಯ ವಿಲ್ಲದೆ ಒಳ್ಳೆಯ ಕಾರ್ಯ ನಿರ್ವಹಿಸುತ್ತಿದೆ, ಆದರೂ ಕೂಡ ಇಂತಹ ಘಟನೆಗಳು ನಡೆಯುತ್ತಿದ್ದು, ಶಾಶ್ವತವಾಗಿ ಇವುಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.