ಹುಬ್ಬಳ್ಳಿ: ಸಿಲಿಂಡರ್ ಸ್ಪೋಟಗೊಂಡು ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಗಾಮನಗಟ್ಟಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸಂಭವಿಸಿದೆ.
ರಾಜಸ್ಥಾನ ಮೂಲದ ಅಶೋಕ, ಸುಭಾಷ್ ಹಾಗೂ ಮಂಗಿಲಾಲ್ ಎಂಬ ಯುವಕರೇ ಗಂಭೀರವಾಗಿ ಗಾಯಗೊಂಡವರು.ಮೂವರ ಸ್ಥಿತಿ ಇದೀಗ ಚಿಂತಾಜನಕವಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಚಹಾ ಮಾಡುವ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ದೇಹದ ಶೇಕಡಾ ಅರ್ಧಕ್ಕಿಂತ ಹೆಚ್ಷು ಭಾಗ ಸುಟ್ಟು ಗಾಯಗಳಾಗಿವೆ. ಸ್ಥಳಕ್ಕೆ ಎಪಿಎಂಸಿ ನವನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಘಟನೆ ಮಾಸುವ ಮುನ್ನವೇ ಇಂತಹದೊಂದು ಘಟನೆ ನಡೆದಿದು, ಜನತೆ ಬೆಚ್ಚಿ ಬಿದ್ದಿದೆ.