ಹುಬ್ಬಳ್ಳಿ: ನಗರದ ಪರೀಕ್ಷಾ ಕೇಂದ್ರವೊಂದರಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಕ್ಲಾರ್ಕ್ ಹುದ್ದೆಗೆ ನಡೆಯುತ್ತಿದ್ದ ಪರೀಕ್ಷೆ ವೇಳೆ ಪರೀಕ್ಷಾರ್ಥಿಯೊಬ್ಬ ಸ್ಮಾರ್ಟ್ ವಾಚ್ನಿಂದ ಪ್ರಶ್ನೆಗಳ ಪೋಟೋ ತೆಗೆದು ವಾಟ್ಸ್ಅಪ್ ಮೂಲಕ ಸ್ನೇಹಿತನಿಗೆ ಕಳುಹಿಸಿ ಬರೆಯುವಾಗ ಸಿಕ್ಕಿ ಬಿದ್ದಿದ್ದಾನೆ.
ಬೆಂಗಳೂರು ಮೂಲದ ಕಂಪನಿಯು ಐಬಿಪಿಎಸ್ ಆನ್ಲೈನ್ 0ಪರೀಕ್ಷೆ ನಡೆಸುವ ಗುತ್ತಿಗೆ ಪಡೆದಿದ್ದು, ಶುಕ್ರವಾರ ಬೆಳಗ್ಗೆ ಬ್ಯಾಂಕಿನ ಕಿರಿಯ ಸಹಾಯಕ ಹುದ್ದೆಗೆ ಪರೀಕ್ಷೆ ನಡೆಸುತ್ತಿತ್ತು. ಈ ವೇಳೆ ಬಳ್ಳಾರಿ ಮೂಲದ ವಿನಾಯಕ ಎಂಬ ಪರೀಕ್ಷಾರ್ಥಿಯು ಅಕ್ರಮವಾಗಿ ನೌಕರಿ ಗಿಟ್ಟಿಸಿಕೊಳ್ಳಲು ಕಂಪ್ಯೂಟರ್ನಲ್ಲಿರುವ ಪ್ರಶ್ನೆಗಳನ್ನು ತನ್ನ ಸ್ಮಾರ್ಟ್ ವಾಚ್ನಲ್ಲಿ ಪೋಟೋ ತೆಗೆದಿದ್ದಾನೆ.
ಅವುಗಳನ್ನು ತನ್ನ ಸ್ನೇಹಿತ ಗೋಕುಲ ಎಂಬಾತನಿಗೆ ವಾಟ್ಸ್ಅಪ್ ಮೂಲಕ ಕಳುಹಿಸಿ ಏಳು ಉತ್ತರಗಳನ್ನು ಪಡೆದು ಬರೆಯುವಾಗ ಪರೀಕ್ಷಾ ಕೇಂದ್ರದ ಅಧಿಕಾರಿ ಕೈಗೆ ಸಿಕ್ಕಿಬಿದ್ದಿದ್ದಾನೆ.
ಈ ಕುರಿತು ಶರತ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದು, ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.