ಧಾರವಾಡ: ಇಲ್ಲಿನ ಸಬ್ ಅರ್ಬನ್ ಠಾಣೆ ಪೊಲೀಸರು ಬೈಕ್ ಕಳ್ಳನನ್ನು ಬಂಧಿಸಿ, ಆತನಿಂದ 1 ಲಕ್ಷಕ್ಕೂ ಅಧಿಕ ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಧಾರವಾಡ ನಿವಾಸಿ ಸಂಜಯ್ ಚೌಹಾಣ್ ಬಂಧಿತ ಆರೋಪಿ. ಹೊಸ ಬಸ್ ನಿಲ್ದಾಣ, ಕಾರ್ಪೊರೇಷನ್ ಸರ್ಕಲ್ ಹಾಗೂ ಜಿಲ್ಲಾ ಆಸ್ಪತ್ರೆ ಬಳಿ ಬೈಕ್ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.

ಈ ಕಾರ್ಯಾಚರಣೆಯಲ್ಲಿ ಎಸಿಪಿ ಪ್ರಶಾಂತ್ ಸಿದ್ದನಗೌಡರ ಇವರ ಮಾರ್ಗದರ್ಶನದಲ್ಲಿ ಸಬ್ ಅರ್ಬನ್ ಇನ್ಸ್ಪೆಕ್ಟರ್ ದಯಾನಂದ್ ಶೇಗುಣಸಿ, ಪಿಎಸ್ಐ ರುದ್ರಪ್ಪ ಗುಡದಾರಿ, ಎಲ್ ಕೆ ಕೋಳಬಾಳ, ಎಎಸ್ಐ ಕೆ ಹೆಚ್ಚು ನೆಲ್ಲೂರು, ಹೆಚ್ ಸಿ. ಬಳ್ಳಾರಿ, ದಯಾನಂದ ಗುಂಡಗೈ, ಮುಸ್ತಫಾ ಬೀಳಗಿ, ಹನುಮಂತ ಜಟನ್ನವರ್, ಅಶೋಕ ಮುಡಷಿ ಹಾಗೂ ಇತರರು ಪಾಲ್ಗೊಂಡಿದ್ದರು. ಇವರುಗಳ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.