ಹುಬ್ಬಳ್ಳಿ: ಡಿಸೇಲ್ ತುಂಬಿದ ಟ್ಯಾಂಕರ್ ಗೆ ಟ್ರಕ್ ವೊಂದು ಹಿಂಬದಿ ಡಿಕ್ಕಿ ಹೊಡೆದ ಪರಿಣಾಮ ಡಿಸೇಲ್ ಟ್ಯಾಂಕ್ ನಿಂದ ಡಿಸೇಲ್ ಪೋಲಾಗಿರುವ ಘಟನೆ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ನವಲಗುಂದ ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಡಿಸೇಲ್ ತುಂಬಿದ ಟ್ಯಾಂಕರ್ ಗೆ ಟ್ರಕ್ ಹೊಡೆದಿದ್ದು, ವಾಹನಗಳು ಜಖಂಗೊಂಡಿವೆ ಇತ್ತ ಪೋಲಾಗುತ್ತಿರುವ ಡಿಸೇಲ್ ನ್ನು ಜನರು ಬಾಟಲ್ ನಲ್ಲಿ ತುಂಬಿಕೊಂಡು ಹೋಗುಲು ಮುಗಿಬಿದ್ದಿರುವ ಘಟನೆಯು ನಡೆಯಿತು.
ಇನ್ನೂ ಅಪಘಾತದ ರಭಸಕ್ಕೆ ಟ್ರಕ್ ನಲ್ಲಿಯೇ ಡ್ರೈವರ್ ಸಿಲುಕಿಕೊಂಡಿದ್ದು, ಡ್ರೈವರ್ ನನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸಪಟ್ಟರು. ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.