ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆಕೋರರ ಕೇಸ್ ವಾಪಸಾತಿ ಪ್ರಕರಣದ ಹಿನ್ನೆಲೆಯಲ್ಲಿ, ಹಳೆ ಹುಬ್ಬಳ್ಳಿ ಗಲಭೆಗೆ ಸಂಭಂದಿಸಿದಂತೆ 12 ಎಫ್ ಐ ಆರ್ ದಾಖಲಾಗಿವೆ. ಏಳು ಗಂಭೀರ ಪ್ರಕರಣಗಳನ್ನು ಸೇರಿಸಿ ಒಂದು ಚಾರ್ಜ್ ಶಿಟ್ ತಯಾರು ಮಾಡಲಾಗಿತ್ತು. ಈ ಏಳು ಎಫ್ಐಆರ್, ಎನ್ಐಎ ಪ್ರಕರಣಗಳನ್ನು ಮಾತ್ರ ವಾಪಸಾತಿಗೆ ಸರ್ಕಾರ ಆದೇಶ ಮಾಡುವ ತೀರ್ಮಾನ ಮಾಡಿದ್ದು, ಸರ್ಕಾರದ ವಿರುದ್ಧ ಯುವ ವಕೀಲರ ತಂಡ ತೊಡೆತಟ್ಟಿ, ಹಳೇ ಹುಬ್ಬಳ್ಳಿ ಕೇಸ್ ವಾಪಸಾತಿ ತೀರ್ಮಾನ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ರೀಟ್ ಅರ್ಜಿ ಸಲ್ಲಿಸಿದ್ದಾರೆ.

ಹೌದು, 2022 ಎಪ್ರಿಲ್ 14 ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೋಮು ಗಲಭೆಯಾಗಿ ಇಡೀ ದೇಶವನ್ನೆ ಬೆಚ್ಚಿಬಿಳಿಸಿತ್ತು. ಅದೆಷ್ಟೋ ಸರ್ಕಾರಿ ಆಸ್ತಿಗಳು ನಾಶವಾಗಿದ್ದವು. 152 ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು. ಈಗ ಸರ್ಕಾರ ಆ ಪಕ್ರರಣವನ್ನು ಹಿಂಪಡೆಯುವ ನಿಟ್ಟಿನಲ್ಲಿದ್ದು, ಈ ಕುರಿತು ಕಾರಣ ಕೇಳಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.

ಗಿರೀಶ್ ಭಾರದ್ವಾಜ್ ಮತ್ತು ಶ್ರೀಧರ್ ಎಂಬ ವಕೀಲರಿಂದ ಕಳೆದ ಫೆಬ್ರವರಿ 16 ಕ್ಕೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ವೆಂಕಟೇಶ ದಳವಾಗಿ ಸರ್ಕಾರದ ವಿರುದ್ಧ ಹೈಕೋರ್ಟ್ ನಲ್ಲಿ ವಾದ ಮಂಡಿಸಲಿದ್ದಾರೆ. ರಿಟ್ ಅರ್ಜಿ ವಿಚಾರಣೆ ಬೆಂಗಳೂರಿನ ಹೈಕೋರ್ಟ್ ನಲ್ಲಿ ಇದೇ ಮಾರ್ಚ್ 17 ರಂದು ವಿಚಾರಣೆ ನಡೆಯಲಿದ್ದು, ಹುಬ್ಬಳ್ಳಿಯ ಸಂಜೀವ್ ಬಡಾಸ್ಕರ ಮತ್ತು ಅಶೋಕ್ ಅಣ್ವೇಕರ್ ತಂಡದಿಂದ ಬೆಂಗಳೂರು ವಕೀಲರಿಗೆ ಸಾಥ್ ನೀಡಿದ್ದಾರೆ.