ಹುಬ್ಬಳ್ಳಿ: ಹೆತ್ತ ಮಗನ ಕಿರುಕುಳ ತಾಳಲಾರದೇ ಮನನೊಂದು ತಾಯಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯ ಚೆನ್ನಪೇಟ್ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಮೌನೇಶ್ವರಮಠದ ಬಾವಿಗೆ ಮಗ ಈರಣ್ಣನ ಕಿರುಕುಳ ತಾಳಲಾರದೇ ಆತನ ತಾಯಿ ಇಂದ್ರಮ್ಮ ಕಮ್ಮಾರ ಎಂಬವರು ಬಾವಿಗೆ ಹಾರಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಹೆತ್ತ ಮಗ ಸರಿಯಾಗಿ ನೋಡಿಕೊಳ್ಳದೇ ಕಿರುಕುಳ ನೀಡುತ್ತಿದ್ದ ಹಿನ್ನಲೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ರಮೇಶ ಗಬ್ಬೂರ ಎಂಬ ಯುವಕ ರಕ್ಷಣೆ ಮಾಡಿದ್ದು, ಸ್ಥಳಯರು ಧೈರ್ಯ ತುಂಬಿದ್ದಾರೆ.

ಮಗ ಕುಡಿದು ನಿತ್ಯ ಕಿರುಕುಳ ನೀಡುತ್ತಿದ್ದಾನೆ. ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಇಂದ್ರಮ್ಮ ಅಂಗಲಾಚಿದ್ದಾಳೆ. ಘಟನೆ ಕುರಿತು ಹಳೇಹುಬ್ಬಳ್ಳಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.