ಹುಬ್ಬಳ್ಳಿ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ಮಧ್ಯೆ ಹೊಡೆದಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನ ಆರೋಪಿಗಳನ್ನು ಬಂಧಿಸುವಲ್ಲಿ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದೇ ಮಾರ್ಚ್ 5 ರಂದು ರಾತ್ರಿ ವೇಳೆ ನಗರದ ತಿಮ್ಮಸಾಗರ ರಸ್ತೆಯ ಐಟಿಐ ಕಾಲೇಜು ಹತ್ತಿರ ಸ್ಥಳೀಯ ಯುವಕರು ಐದು ಸಾವಿರ ರೂ. ಹಣಕಾಸಿನ ವ್ಯವಹಾರಕ್ಕೆ ಪರಸ್ಪರ ಹೊಡೆದಾಡಿಕೊಂಡು ಪೋಲಿಸ್ ಠಾಣೆಯ ಮೆಟ್ಟಿಲು ಏರಿದ್ದರು. ಎರೆಡು ಕಡೆಯಿಂದ ಪ್ರಕರಣ ಕೂಡ ದಾಖಲು ಮಾಡಲಾಗಿತ್ತು.

ಕೂಡಲೇ ಕಾರ್ಯಪ್ರವೃತ್ತರಾದ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆ ಇನ್ಸ್ಪೆಕ್ಟರ್ ಎಮ್.ಎನ್.ಸಿಂಧೂರ ಹಾಗೂ ಪಿಎಸ್ಐ ಬಿ.ಎನ್.ಸಾತಣ್ಣವರ ಅವರ ನೇತೃತ್ವದ ತಂಡ ತಿಮ್ಮಸಾಗರದ ದೀಪಕ ಪೂಜಾರ, ರಾಘವೇಂದ್ರ ಪೂಜಾರ, ಅಮರ ಪೂಜಾರ, ಶಂಕರ ಜಿತೂರಿ, ವಿಶ್ಲೇಶ ಕೇಸರಕರ, ಸಚಿನ್ ಹನಮನಹಳ್ಳಿ, ಕುಶಾಲ ಬೆಳಮಕರ, ಸಾಗರ ಲಕ್ಕುಂಡಿ ಸೇರಿ ಅಪ್ರಾಪ್ತ ಬಾಲಕನನ್ನು ಬಂಧಿಸಿ ಮುಂದೆ ಆಗುವ ಸಂಘರ್ಷವನ್ನು ತಪ್ಪಿಸಿದಂತಾಗಿದೆ, ಸಧ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರ ಕಾರ್ಯವೈಖರಿಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಶ್ಲಾಘಿಸಿದ್ದಾರೆ.