ಹುಬ್ಬಳ್ಳಿ: ತೊಟ್ಟಿಲ್ಲನ್ನು ತೂಗುವ ಕೈಗಳು ಜಗತ್ತನ್ನೇ ಆಳಬಲ್ಲದು ಎಂಬ ಮಾತಿನಂತೆ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳು ಕೇಕ್ ಕತ್ತರಿಸುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಿ ಸಂಭ್ರಮಿಸಿದ್ದಾರೆ.

ಮಾರ್ಚ್ 8 ರಂದು ಮಹಿಳಾ ದಿನಾಚರಣೆಯನ್ನು ಮಹಿಳೆಯರಿಗಾಗಿ ವಿಶೇಷವಾಗಿ ಆಚರಿಸಲಾಗುತ್ತಿದೆ ತಾಯಿ, ಸಹೋದರಿ, ಮಗಳು ಹೀಗೆ ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು ನೀಡುತ್ತೇವೆ. ಇಂದು ಸಮಾಜದಲ್ಲಿ ಕೂಲಿ ಕೆಲಸದಿಂದ ರಾಷ್ಟ್ರಪತಿ ಹುದ್ದೆಯವರೆಗೂ ಮಹಿಳೆ ಒಂದಿಲ್ಲೊಂದು ಕ್ಷೇತ್ರದಲ್ಲಿ ಸಾಧನೆಗೈದಿದ್ದು, ಪುರಷರ ಸಮನಾಗಿ ಮಹಿಳೆಯರು ಜಗತ್ತಿಗೆ ತನ್ನದೇಯಾದ ಕೊಡುಗೆ ನೀಡಿದ್ದಾರೆ.

ಇಂದು ಮಹಿಳೆಯರಿಗಾಗಿ ವಿಶೇಷ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ಸಂಸಾರ ನೌಕೆ ಸಾಗಿಸುವ, ಮನೆ ಹಾಗೂ ಜಗತ್ತನ್ನೆ ಬೆಳಗಿಸುವ ಮಹಿಳೆಯರಿಗೆ ಕರ್ನಾಟಕ ಪಬ್ಲಿಕ್ ವಾಯ್ಸ್ ನಿಂದ ನಮ್ಮದೊಂದು ಸಲಾಂ.