ಹುಬ್ಬಳ್ಳಿ: ಅಂಗನವಾಡಿ ಮಕ್ಕಳ ಪೌಷ್ಠಿಕ ಆಹಾರ ಕಳ್ಳ ಸಾಗಾಣಿಕೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಳೆದ ಫೆಬ್ರವರಿ 15 ರಂದು ಗೋಡೌನ್ ಒಂದರಲ್ಲಿ ಪತ್ತೆ ಮಾಡಲಾಗಿದ್ದ ಅಂಗನವಾಡಿ ಮಕ್ಕಳ ಪೌಷ್ಠಿಕ ಆಹಾರ ದಾಸ್ತಾನು ವಿಚಾರದಲ್ಲಿ ಈಗಾಗಲೇ 26 ಕ್ಕೂ ಅಧಿಕ ಖದೀಮರನ್ನು ಬಂಧನ ಮಾಡಿ ಪೊಲೀಸ್ ಇಲಾಖೆ ಕೈತೊಳೆದುಕೊಂಡಿದೆ.

ಅಷ್ಟೇ ಅಲ್ಲದೆ ಯಾರೋ ಮಾಡಿದ ತಪ್ಪಿಗೆ ಮತ್ಯಾರಿಗೋ ಶಿಕ್ಷೆ ಎಂಬಂತೆ ಕಸಬಾಪೇಟ್ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂಧಿಗಳನ್ನ ಅಮಾನತ್ತು ಮಾಡಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಆದೇಶ ಕೂಡ ಮಾಡಿದ್ದಾರೆ. ಆದ್ರೆ ಈ ಅಕ್ರಮ ಧಂದೆಯ ರೂವಾರಿಗಳು ಕಳೆದ 25 ದಿನಗಳಿಂದ ತಲೆಮರೆಸಿಕೊಂಡರೂ ಪೊಲೀಸ್ ಇಲಾಖೆ ಮಾತ್ರ ಆ ಪ್ರಮುಖ ಇಬ್ಬರು ಆರೋಪಿಗಳನ್ನ ಇನ್ನೂ ಪತ್ತೆ ಹಚ್ಚುವ ಕೆಲಸದಲ್ಲೇ ಇದೆ. ಆದ್ರೆ ಇಲ್ಲೇ ಇದೇ ನೋಡಿ ಬಹುದೊಡ್ಡ ಟ್ವಿಸ್ಟ್….

ಅಂಗನವಾಡಿ ಪೌಷ್ಠಿಕ ಆಹಾರ ಅಕ್ರಮ ಸಾಗಾಣಿಕೆ ಪ್ರಕರಣದ ಬೆಳವಣಿಗಳ ಬಹುದೊಡ್ಡ ಟ್ವಿಸ್ಟ್ ಬಗ್ಗೆ ನಿಮ್ಮ ಕರ್ನಾಟಕ ಪಬ್ಲಿಕ್ ವಾಯ್ಸ್ ಎಕ್ಸ್ಲ್ಯೂಸಿವ್ ದಾಖಲೆ ಸಮೇತ ಮಾಹಿತಿಯನ್ನ ಬಿಚ್ಚಿಡುತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳು ಬತುಲ್ ಕಿಲ್ಲೇದಾರ್ ಹಾಗೂ ಫಾರುಖ್ ಕಿಲ್ಲೇದಾರ್. ಈ ಇಬ್ಬರು ಆರೋಪಿಗಳ ಪತ್ತೆ ಮಾಡುವ ವಿಚಾರದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಸಂಪೂರ್ಣ ಫೆಲ್ಯೂರ್ ಆಗಿದ್ದಾರೆ ಅಂತಾ ಘಂಟಾನುಘೋಷವಾಗಿ ಶಾಸಕ ಪ್ರಸಾದ್ ಅಬ್ಬಯ್ಯ ಸದನದಲ್ಲೇ ಅಸಮಾಧಾನ ವ್ಯಕ್ತಪಡಿಸಿರೋದು ಎಲ್ರಿಗೂ ಗೊತ್ತಿರೋ ವಿಷಯ. ಅಲ್ದೇ ಇದಕ್ಕೆ ಪೂರಕವೆಂಬಂತೆ ಕೇಂದ್ರ ಸಚಿವರಿಂದಲೂ ಪೊಲೀಸ್ ಕಮಿಷನರ್ ನಡೆ ಕುರಿತ ಅಸಮಾಧಾನವೂ ಕೂಡ ವ್ಯಕ್ತವಾಗುತ್ತಿದೆ.

ಆದ್ರೆ ಪೊಲೀಸ್ ಅಧಿಕಾರಿಗಳ, ಜನಪ್ರತಿನಿಧಿಗಳ ನಡುವೆ ನಡೆಯುತ್ತಿರೋ ಈ ಕೋಲ್ಡ್ ವಾರ್ ನಡುವೆಯೇ ಈ ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಯಾಗಿರೋದೇ ಯಾರಿಗೂ ಗೊತ್ತಿಲ್ಲದಿರುವುದು ನಿಜಕ್ಕೂ ವಿಪರ್ಯಾಸ.ಪೊಲೀಸ್ ಇಲಾಖೆ ಮಾತ್ರ ಇನ್ನೂ ಈ ಪ್ರಕರಣದ ಆರೋಪಿಗಳನ್ನ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದ್ರೆ ಈಗಾಗಲೇ ಪ್ರಕರಣದ ಪ್ರಮುಖ ಕಿಂಗ್ ಪಿನ್ ಫಾರೂಖ್ ಕಿಲ್ಲೇದಾರ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ಹಿನ್ನೆಲೆ ಈ ಪ್ರಕರಣವೇ ಖುಲಾಸೆಯಾಗಿರೋದು ನಿಜಕ್ಕೂ ಸೋಜಿಗವೆನಿಸಿದೆ.

ಕೇವಲ ನಾಲ್ಕೈದು ದಿನಗಳಲ್ಲೇ ಈ ಪ್ರಕರಣ ಖುಲಾಸೆಯಾಗಿದ್ರೂ ಪೊಲೀಸ್ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಬಂದೇ ಇಲ್ವಾ ಅನ್ನೋದು ಇದೀಗ ಬಹು ಚರ್ಚೆಯ ವಿಷಯ. ಇದೆಲ್ಲವನ್ನ ಗಮನಿಸಿದ್ರೆ ಪ್ರಮುಖ ಆರೋಪಿ ಫಾರೂಖ್ ಕಿಲ್ಲೇದಾರ್ ಮೇಲಿನ ಪ್ರಕರಣ ಖುಲಾಸೆಯಾದ ಬೆನ್ನಲ್ಲೇ ಬತುಲ್ ಕಿಲ್ಲೇದಾರ್ ಕೇಸ್ ಕೂಡ ಖಯಲಾಸೆಯಾಗೋದ್ರಲ್ಲಿ ಸಂಶಯವೇ ಇಲ್ಲ ಬಿಡಿ.
*ಕಾಲಾಯ ತಸ್ಮೈ ನಮಃ*