ಹುಬ್ಬಳ್ಳಿ: ಪತಿ ಪತ್ನಿಯ ವಿಚ್ಚೇದನ ವಿಚಾರವಾಗಿ ಪತ್ನಿಯೇ ತನ್ನ ಪತಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಹುಬ್ಬಳ್ಳಿಯ ಕೋರ್ಟ್ ನ್ ಪಾರ್ಕಿಂಗ್ ಜಾಗದಲ್ಲಿ ನಡೆದಿದೆ.
ನಗರದ ಶಾಂತಿನಿಕೇತನ ನಿವಾಸಿಯಾಗಿರೋ ಲಲಿತಾ ಮಾಳೆ ಹಾಗೂ ರಾಮದುರ್ಗದಲ್ಲಿ ಕೆ.ಎಸ್. ಆರ್.ಟಿ.ಸಿ ನೌಕರನಾಗಿರೋ ಕುಮಾರ ಮಾಳೆ ಎಂಬ ಪತಿ ಪತ್ನಿಯ ಮಧ್ಯೆ ಈ ಜಗಳ ನಡೆದಿದೆ. ಲಲಿತಾ ಹೇಳುವ ಪ್ರಕಾರ ರಾಮದುರ್ಗ ಕೋರ್ಟ್ ನಲ್ಲಿ 2024 ರ ಜೂನ್ 16 ರಂದು ವಿಚ್ಛೇದನ ಪತ್ರಕ್ಕೆ ನಕಲಿ ಸಹಿ ಮಾಡಿಸಿ ವಿಚ್ಛೇದನ ಮಾಡಿಸಿದಾವುದಾಗಿ ಲಲಿತಾ ಆರೋಪಿಸಿದ್ದಾರೆ. ಈ ಹಿನ್ನೆಲೆ ಕೋರ್ಟ್ ನಲ್ಲಿ ಜೀವನಾಂಶಕ್ಕಾಗಿ ಸಲ್ಲಿಸಿದ ಅರ್ಜಿ ಹಿನ್ನೆಲೆ ಸರಿಯಾದ ಸಮಯಕ್ಕೆ ಕೋರ್ಟ್ ಗೆ ಪತಿ ಕುಮಾರ ಮಾಳೆ ಆಗಮಿಸದ ಹಿನ್ನೆಲೆ ಕೋಪಗೊಂಡ ಪತ್ನಿ ಹಾಗೂ ಆಕೆಯ ಸಹೋದರಿ ಕುಮಾರ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪತ್ನಿ ಲಲಿತಾ ಕೋರ್ಟ್ ಗೆ ಆಗಮಿಸಿದ್ದರೂ ವಿಚಾರಣೆ ವೇಳೆ ಪತಿ ಕೋರ್ಟ್ ಗೆ ಹಾಜರಾಗದೇ ಇರೋ ಹಿನ್ನೆಲೆ ಈ ವೇಳೆ ಆತನ ಮೇಲೆ ಹಲ್ಲೆ ಮಾಡಿದ್ದು, ಪತ್ನಿ ಹಲ್ಲೆ ನಡೆಸಿರೋ ವೀಡಿಯೋ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಈ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.