ಗೋಕಾಕ್: ಗೋಕಾಕ್ ದುರ್ಗಾದೇವಿ ಬಂಡಾರ ಕಾರ್ಯಕ್ರಮದ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿದ್ದ ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆಯ ಎಎಸ್ಐ ಮೀರಾ ನಾಯಕ್ ಅವರು ಹೃದಯಾಘಾತದಿಂದ ದುರ್ಮರಣ ಹೊಂದಿದ್ದಾರೆ.
ಅವರು ಗೋಕಾಕ್ ಪಟ್ಟಣದ ಎಸ್ಸಿ/ಎಸ್ಟಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯವಿದ್ದ ಸಂದರ್ಭದಲ್ಲಿ ಹೃದಯಾಘಾತ ಉಂಟಾಗಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಕ್ಷಣವೇ ಸಹೋದ್ಯೋಗಿಗಳು ವೈದ್ಯಕೀಯ ನೆರವಿಗೆ ಯತ್ನಿಸಿದರೂ, ಅವರು ಮೃತಪಟ್ಟಿದ್ದಾರೆಂದು ದೃಢಪಟ್ಟಿದೆ.

ಮೃತದೇಹವನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಎಎಸ್ಐ ಮೀರಾ ನಾಯಕ್ ಅವರು ಕರ್ತವ್ಯದಷ್ಟೇ ಅಲ್ಲದೆ ಸಹೋದ್ಯೋಗಿಗಳೊಂದಿಗೆ ಉತ್ತಮ ಹೊಂದಾಣಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಅಕಾಲಿಕ ನಿಧನಕ್ಕೆ ಸಹೋದ್ಯೋಗಿಗಳು, ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ದೀವನ ಸಲ್ಲಿಸಿದ್ದಾರೆ.

ನಮ್ಮ ಸುದ್ದಿವಾಹಿನಿ ಕೂಡ ಎಎಸ್ಐ ಮೀರಾ ನಾಯಕ್ ಅವರಿಗೆ ನಮ್ಮ ಅಂತಃಕರಣದ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇವೆ.