ಹುಬ್ಬಳ್ಳಿ: ಈಗಾಗಲೇ ನಗರದಲ್ಲಿ ನಾಯಿ ಕೊಡೆಗಳಂತೆ ಸ್ಪಾ ಸೆಂಟರ್\’ಗಳು ತೆರೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಇದೀಗ ಅಡ್ಡದಾರಿ ಹಿಡಿದು ಸ್ಪಾ ಸೆಂಟರ್ ತೆರೆದು ಜನರಿಗೆ ಹಾಗೂ ಮಹಾನಗರ ಪಾಲಿಕೆಗೆ ಯಾಮಾರಿಸುತ್ತಿರುವ ಘಟನೆವೊಂದು ಬೆಳಕಿಗೆ ಬಂದಿದೆ.
ಹೌದು, ಹುಬ್ಬಳ್ಳಿಯಲ್ಲಿಗ ಜನರು ತಮ್ಮ ಬ್ಯುಜಿ ಲೈಫ್\’ನಲ್ಲಿ ರಿಲ್ಯಾಕ್ಸ್ ಮೂಢಗೆ ಹೋಗಲು ಸ್ಪಾ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿಯೇ ಹುಬ್ಬಳ್ಳಿಯ ಪ್ರತಿಷ್ಠಿತ ನಗರದಲ್ಲಿ ಎಲ್ಲೆಂದರಲ್ಲಿ ಸ್ಪಾ ಸೆಂಟರ್\’ಗಳು ತಲೆ ಎತ್ತಿದ್ದು, ಅನೇಕ ಮಸಾಜ್ ಸರ್ವಿಸ್ ಪಟ್ಟಿಯನ್ನು ತಮ್ಮ ಗ್ರಾಹಕರಿಗೆ ನೀಡುತ್ತಿವೆ.
ಈ ರೀತಿಯಾಗಿ ಸ್ಪಾ ಸೆಂಟರ್ ತೆರೆಯಲು ಅದರದೇ ಆದ ನಿಯಮಗಳನ್ನು ಹೊಂದಿದೆ. ಪಾಲಿಕೆ ಇದಕ್ಕಾಗಿಯೇ ಅನುಮತಿ ನೀಡುವ ಕಾರ್ಯ ಮಾಡುತ್ತಿದೆ. ಆದರೆ ಇದೀಗ ಸ್ಪಾ ಸೆಂಟರ್\’ಗಳ ಮಾಲೀಕರು ಯಾವುದೇ ಪರವಾನಗಿ ಪಡೆಯದೇ ಸ್ಪಾ ಸೆಂಟರ್ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ನಿಮ್ಮ ಕರ್ನಾಟಕ ಪಬ್ಲಿಕ್ ವೈಸ್ ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಅನೇಕ ಶಾಕಿಂಗ್ ಸಂಗತಿಗಳು ಬೆಳಕಿಗೆ ಬಂದಿದೆ. ಇದರಲ್ಲಿ ಪಾಲಿಕೆಯಿಂದ ಅನುಮತಿ ಪಡೆದ ಸ್ಪಾ\’ಗಳ ಸಂಖ್ಯೆಗಿಂತ ಪರವಾನಗಿ ಪಡೆಯದೇ ನಡೆಸುತ್ತಿರುವ ಸ್ಪಾ ಗಳೇ ಹೆಚ್ಚು ಎಂಬ ಗಂಭೀರವಾದ ಸಂಗತಿ ಬೆಳಕಿಗೆ ಬಂದಿದೆ.
ಈ ರೀತಿ ಕಾನೂನು ಬಾಹಿರ ಹಾಗೂ ಅನುಮತಿ ಪಡೆದು ನಡೆಸುತ್ತಿರುವ ಸ್ಪಾಗಳಲ್ಲಿ ಕೂಡ ಹೈಟೆಕ್ ವೇಶ್ಯಾವಾಟಿಕೆ ಸಹ ನಡೆಸಲಾಗುತ್ತಿದೆ ಎಂಬ ಸದ್ದು ಜೋರಾಗಿದೆ. ಇದು ಗೊತ್ತಿದ್ದರೂ ಸಹ ಆಯಾ ಸೆಂಟರ್ ವ್ಯಾಪ್ತಿಯ ಪೋಲಿಸರು ಕಚ್ಚುಮುಚ್ಚಿ ಕುಳಿತ್ತಿದ್ದಾರೆಂಬ ಆರೋಪವು ಇದೆ.
ಈ ಬಗ್ಗೆ ನಿಮ್ಮ ಕರ್ನಾಟಕ ಪಬ್ಲಿಕ್ ವೈಸ್ ಮುಂದಿನ ದಿನಗಳಲ್ಲಿ ಒಂದೊಂದಾಗಿ ವಿಡಿಯೋ, ದಾಖಲೆಗಳ ಸಮೇತವಾಗಿ ಸುದ್ದಿ ಬಿತ್ತರಿಸಲಿದೆ.
Exclusive ರಹಸ್ಯ ಕಾರ್ಯಾಚರಣೆ ಸುದ್ದಿಗಳಿಗಾಗಿ ಕಾಯತ್ತಾ ಇರೀ…