ಹುಬ್ಬಳ್ಳಿಯ ಎಪಿಎಂಸಿ ನವನಗರ ಪೊಲೀಸ್ ಠಾಣೆ ಇನ್ಸೆಕ್ಟರ್ ಸಮಿಉಲ್ಲಾ ಖಾನ್ ತಮ್ಮ ಪೋಲಿಸ್ ಠಾಣೆಯಲ್ಲಿ ವಿಶಿಷ್ಟವಾಗಿ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಭಾವೈಕ್ಯಗೆ ಸಾಕ್ಷಿಯಾಗಿದ್ದಾರೆ. ಈ ಮೂಲಕ ಜಾತಿ, ಧರ್ಮಗಳ ನಡುವೆ ಒಡಕುಂಟು ಮಾಡುವ ಕಿಡಿಗೇಡಿಗಳಿಗೆ ಮಾದರಿಯಾಗಿದ್ದಾರೆ.
ಹೌದು, ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ಅದರಲ್ಲೂ ಠಾಣೆಯ ಇನ್ಸೆಕ್ಟರ್ ಮಾಡಿರುವ ಕೆಲಸ ನೋಡಿದರೆ ತುಂಬಾ ತುಂಬಾ ಖುಷಿಯಾಗುತ್ತದೆ ಸಧ್ಯ ಬಂದಿರುವ ಗಣೇಶ ಹಬ್ಬದಲ್ಲಿ ಠಾಣೆಯಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಹಾಗೂ ಠಾಣೆಯಲ್ಲಿ ತಾವೇ ಸ್ವತಃ ಸತ್ಯ ನಾರಾಯಣ ಪೂಜೆ ಮಾಡುವ ಮೂಲಕ ಜಾತಿ – ಧರ್ಮಗಳ ಗೋಡೆ ಕಟ್ಟಿಕೊಂಡವರ ಮಧ್ಯೆ ಭಾವೈಕ್ಯತೆ ಮೆರೆದಿದ್ದಾರೆ ಇನ್ಸೆಕ್ಟರ್ ಸಮಿಉಲ್ಲಾ ಕೆ. ಮತ್ತು ಠಾಣೆಯ ಸಿಬ್ಬಂದಿಗಳು.
ಸಮಾಜದಲ್ಲಿ ಸರ್ವಧರ್ಮ ಭಾವೈಕ್ಯತೆಯೇ ಮುಖ್ಯ ಎನ್ನುವ ಮಾತಿಗೆ ಹುಬ್ಬಳ್ಳಿ ನವನಗರ ಪೊಲೀಸ್ ಠಾಣಾ ಮುಖ್ಯಾಧಿಕಾರಿ ಸಮಿಉಲ್ಲಾ ಕೆ ಅವರು ಮತ್ತು ಠಾಣೆಯ ಎಲ್ಲಾ ಸಿಬ್ಬಂದಿ ತಾವೇ ಸ್ವತಃ ಗಣೇಶ ನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಸಾಮಾಜಿಕ ಭಾವೈಕ್ಯತೆ ಮೆರೆದಿದ್ದಾರೆ. ಹಣೆಗೆ ತಿಲಕ ಇಟ್ಟು ಕೊಂಡು ಕೈಯಲ್ಲಿ ಗಣೇಶ ಮೂರ್ತಿ ಹಿಡಿದು ಪೊಲೀಸ್ ಜೀಪಿನಲ್ಲಿ ತೆರಳಿ ಪ್ರತಿಷ್ಠಾಪನೆ ಮಾಡುವ ಮೂಲಕ ಜಾತಿ – ಧರ್ಮಗಳ ಗೊಡೆ ಕಟ್ಟಿಕೊಂಡವರ ಮಧ್ಯೆ ಭಾವೈಕ್ಯತೆ ಗೆ ಏಕರೂಪ ನೀಡಿದ್ದಾರೆ.
ಇವರ ಈ ಒಂದು ಕಾರ್ಯಕ್ಕೆ ಠಾಣೆಯ ಎಲ್ಲಾ ಸಿಬ್ಬಂದಿ ಸಾಥ್ ನೀಡಿದ್ದಾರೆ . ಹೀಗಾಗಿ ನವನಗರ ಪೋಲಿಸ್ ಠಾಣಾಧಿಕಾರಿಯ ಮತ್ತು ಸಿಬ್ಬಂದಿಗಳ ಮಾದರಿ ಕಾರ್ಯಕ್ಕೊಂದು ಸಲಾಂ ಹೇಳಲೇಬೇಕು.