ಹುಬ್ಬಳ್ಳಿ: ಚೋಟಾ ಮುಂಬೈ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯಲ್ಲಿ ಮತ್ತೆ ರೌಡಿಗಳ ಅಟ್ಟಹಾಸ ಜೋರಾಗಿ ನಡೆದಿದೆ. ಎರಡು ರೌಡಿ ಗ್ಯಾಂಗ್ಗಳ ನಡುವೆ ಭೀಕರ ಗ್ಯಾಂಗ್ವಾರ್ ನಡೆದಿದ್ದು, ಹಳೇ ವೈಷಮ್ಯದ ಹಿನ್ನೆಲೆ ಈ ಗಲಾಟೆಗೆ ಕಾರಣ ಎನ್ನಲಾಗಿದೆ.
ಮಂಟೂರ ರಸ್ತೆಯ ದಾವೂದ್ ನದಾಫ್ ಗ್ಯಾಂಗ್ ಹಾಗೂ ಸೆಟಲ್ಮೆಂಟ್ ನ ಅಭಿಷೇಕ್ ಜಾಧವ್ ನೇತೃತ್ವದ ಗ್ಯಾಂಗ್ ನಡುವೆ ಗಲಾಟೆ ನಡೆದಿದೆ. ಮಂಟೂರ ರಸ್ತೆಯ ಸ್ಮಶಾನಕ್ಕೆ ಹೋದ ಸಂದರ್ಭದಲ್ಲಿ ಎರೆಡು ಗ್ಯಾಂಗ್ ಮದ್ಯ ವಾಗ್ವಾದ ನಡೆದು ಗಲಾಟೆ ಸಂಭವಿಸಿದೆ.
ಕ್ಷಣಾರ್ಧದಲ್ಲಿ ತೀವ್ರ ಗಲಾಟೆ ನಡೆದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಲಾಠಿ, ಕಬ್ಬಿಣದ ರಾಡ್, ಕಲ್ಲುಗಳು ಬಳಕೆಯಾದ ಈ ಗಲಾಟೆಯಲ್ಲಿ ಹಲವರು ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ಸ್ಥಳೀಯರು ಭೀತಿಯಿಂದ ತಮ್ಮ ಮನೆಗಳಿಗೆ ಓಡಿದ್ದು, ವ್ಯಾಪಾರಸ್ಥರು ಶಟರ್ಗಳನ್ನು ಕೆಳಗೆ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
https://www.instagram.com/reel/DL4zyXdSLiM/?igsh=MTU0OWJxbmc5ODZybw==
ಸ್ಥಳಕ್ಕೆ ಶಹರ ಪೊಲೀಸ್ ಠಾಣೆ ಹಾಗೂ ಬೆಂಡಿಗೇರಿ ಠಾಣೆಯ ಸಿಬ್ಬಂದಿ ತ್ವರಿತವಾಗಿ ಧಾವಿಸಿ ಗಲಾಟೆ ನಿಯಂತ್ರಣಕ್ಕೆ ಮುಂದಾದರು. ಕೂಡಲೇ ಹಿಂಸಾಚಾರ ತಡೆಯಲು ಬಿಗುವಿನ ಭದ್ರತೆ ಒದಗಿಸಲಾಯಿತು. ಪೊಲೀಸರ ಸಮಯಪ್ರಜ್ಞೆ ಹಾಗೂ ತ್ವರಿತ ಕಾರ್ಯಾಚರಣೆಯಿಂದ ಒಂದು ದೊಡ್ಡ ಅನಾಹುತ ತಪ್ಪಿದಂತಾಗಿದೆ.ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ವಿಚಾರಣೆಗೂ ಒಳಪಡಿಸಲಾಗುತ್ತಿದ್ದು, ಗಲಾಟೆಗೆ ಕಾರಣವಾಗಿರುವ ವ್ಯಕ್ತಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ
ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಶಾಂತಿಯ ಪರಿಸರದ ನಡುವೆ ಈ ರೀತಿಯ ಘಟನೆಗಳು ಸಾರ್ವಜನಿಕರಲ್ಲಿ ಭಯ ಮೂಡಿಸುತ್ತಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಮೂಡುತ್ತಿವೆ.ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಈ ಘಟನೆಗೆ ತೀವ್ರ ಗಮನ ಹರಿಸಿದ್ದು, ಸಂಬಂಧಿತ ಗ್ಯಾಂಗ್ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಈ ರೀತಿಯ ಗ್ಯಾಂಗ್ವಾಳಿಗೆ ಮುಕ್ತಿ ಕೊಡಿಸಲು ಸ್ಥಾಪಿಸಲಾಗುತ್ತಿದೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮ ಕೈಗೊಂಡು, ಹುಬ್ಬಳ್ಳಿಯ ಶಾಂತತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಪೋಲಿಸ್ ಇಲಾಖೆಗೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ.