ಹುಬ್ಬಳ್ಳಿ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸ್ ಮೇಲೆಯೇ ಹಲ್ಲೆ ಮಾಡಿದ್ದ ಆರೋಪದ ಅಡಿ ಇಬ್ಬರನ್ನು ಬಂಧಿಸಲಾಗಿದೆ.
ಪ್ರಶಾಂತ ನಾಗಪ್ಪನವರ, ಕಾರ್ತಿಕ ಮಾಕಾಪುರ ಬಂಧಿತ ಆರೋಪಿಗಳು. ಹಳೇಹುಬ್ಬಳ್ಳಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ಗೋಪನಕೊಪ್ಪದಿಂದ ಕರೆದುಕೊಂಡು ಹೋಗುವಾಗ, ಹೆಗ್ಗೇರಿ ಸ್ಮಶಾನಗಟ್ಟಿ ಹತ್ತಿರ ಪೊಲೀಸ್ ಸಿಬ್ಬಂದಿ ರಮೇಶ ಎಂಬುವವರ ಮೇಲೆ ಮಾಡಿ ತಪ್ಪಸಿಕೊಳ್ಳಲು ಯತ್ನಿಸಿದ್ದರು ಎನ್ನಲಾಗಿದೆ.

ಬಂಧಿತ ಆರೋಪಿಗಳು ಕಾರವಾರ ರಸ್ತೆಯ ಬಾರೊಂದರ ಹತ್ತಿರ ಮದ್ಯದ ವಿಚಾರವಾಗಿ ಗಲಾಟೆ ಮಾಡಿ ಗಣೇಶ ಎಂಬಾತನಿಗೆ ಚಾಕುವಿನಿಂದ ಇರಿಯಲು ಮುಂದಾಗಿದ್ದರು. ಈ ಕುರಿತು ಕೂಡ ಪ್ರಕರಣ ದಾಖಲಾಗಿತ್ತು. ಇದೆ ವಿಚಾರಕ್ಕೆ ಅವರನ್ನು ಬಂಧಿಸಿ ಕರೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.