ಧಾರವಾಡ ಸಬ್ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಹಾವೇರಿಗಲ್ಲಿಯಲ್ಲಿ, ಹಣದ ವಿಚಾರಕ್ಕೆ ಉಂಟಾದ ಜಗಳದಲ್ಲಿ ಖಾವಾಜ ಶಿರಹಟ್ಟಿ ಎಂಬಾತನು ರಾಘವೇಂದ್ರ ಗಾಯಕ್ವಾಡ್ ಎಂಬವವನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ರಾಘವೇಂದ್ರ ನಿನ್ನೆ ತಡ ರಾತ್ರಿ ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾನೆ.

ಅಣ್ಣನ ದುಡ್ಡಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ತಮ್ಮನಿಗೆ ಚಾಕು ಇರಿದ ಪರಿಣಾಮ ಗಂಭೀರ ಗಾಯಗೊಂಡ ರಾಘವೇಂದ್ರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿಸಲಾಗಿತ್ತು. ಆದರೆ ಚಿಕಿತ್ಸೆ ಪಾಲಿಸದೆ ರಾಘವೇಂದ್ರ ಮೃತಪಟ್ಟಿದ್ದಾನೆ.

ಇನ್ನು ರಾಘವೇಂದ್ರನಿನೆ ಚಾಕು ಹಾಕಿದ ವ್ಯಕ್ತಿ ಖಾವಾಜ ಶಿರಹಟ್ಟಿ ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಸಂದರ್ಭದಲ್ಲಿ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿತ್ತು.

ಈ ದಾರುಣ ಘಟನೆ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣವನ್ನುಂಟುಮಾಡಿದ್ದು, ಇಂಥ ಕ್ರೌರ್ಯಕ್ಕೆ ಮೆರಗು ನೀಡುವ ಮನಸ್ಥಿತಿಯ ತಡೆಗಟ್ಟಲು ಸಮಾಜ ಹಾಗೂ ಕಾನೂನು ವ್ಯವಸ್ಥೆ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ.
ತೀವ್ರ ಅಸಹಿಷ್ಣುತೆ, ತಾಳ್ಮೆಯ ಕೊರತೆ ಹಾಗೂ ರಕ್ತಬಾಯಿಯ ಚಟುವಟಿಕೆಗಳು ಬೇರೊಡೆದು ಬರುತ್ತಿರುವಂತಿದೆ. ಯುವಪೀಳಿಗೆಯ temperamental nature ನಿಭಾಯಿಸಲು ಶಿಸ್ತಿನ ಶಿಕ್ಷಣ, ಮಾನಸಿಕ ಬೆಳವಣಿಗೆ ಹಾಗೂ ಸಾಮಾಜಿಕ ಜವಾಬ್ದಾರಿಯ ಬೋಧನೆ ಎಷ್ಟು ಅಗತ್ಯ ಎಂಬುದನ್ನು ಈ ಘಟನೆಯು ಪುನರುಚ್ಚರಿಸಿದೆ.